×
Ad

ಬಾಂಗ್ಲಾದಲ್ಲಿ 3 ಲಕ್ಷ ರೋಹಿಂಗ್ಯಾ ನಿರಾಶ್ರಿತರು: ವಿಶ್ವಸಂಸ್ಥೆ

Update: 2017-09-11 22:05 IST

ಕಾಕ್ಸ್ ಬಝಾರ್,ಸೆ.11: ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ಹಿಂಸಾಚಾರ ಭುಗಿಲೆದ್ದ ಬಳಿಕ, ಅಲ್ಲಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ 3.13 ಲಕ್ಷ ತಲುಪಿರುವುದಾಗಿ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ವಕ್ತಾರ ಜೋಸೆಫ್ ತ್ರಿಪುರಾ ತಿಳಿಸಿದ್ದಾರೆ.

  ರಾಖೈನ್ ರಾಜ್ಯದಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿಯಿದೆಯಾದರೂ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾಕ್ಕೆ ಆಗಮಿಸುತ್ತಿರುವ ರೋಹಿಂಗ್ಯನ್ನರ ಸಂಖ್ಯೆಯಲ್ಲಿ ಇಳಿಮುಖವಾಗಿದೆಯೆಂದು ಅವರು ತಿಳಿಸಿದ್ದಾರೆ.

 ಮ್ಯಾನ್ಮಾರ್‌ಗೆ ತಾಗಿಕೊಂಡಿರುವ ತನ್ನ ಗಡಿಯಲ್ಲಿ ಬಾಂಗ್ಲಾ ಸರಕಾರವು ರೊಹಿಂಗ್ಯಾಮುಸ್ಲಿಮರಿಗಾಗಿ ಈಗಾಗಲೇ ಹಲವಾರು ನಿರಾಶ್ರಿತ ಶಿಬಿರಗಳನ್ನು ಹಾಗೂ ತಾತ್ಕಾಲಿಕ ವಸತಿಗಳನ್ನು ಸ್ಥಾಪಿಸಿದೆ. ಬಾಂಗ್ಲಾದಲ್ಲಿ ಪ್ರಸ್ತುತ 4 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ವಲಸಿಗರಿದ್ದಾರೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News