ಕಾಂಚಾ ಐಲಯ್ಯ ಅವರ ಪುಸ್ತಕ ನಿಷೇಧಕ್ಕೆ ಆಗ್ರಹ
Update: 2017-09-11 22:47 IST
ಹೈದರಾಬಾದ್, ಸೆ. 5: ದಲಿತ ಚಿಂತಕ ಹಾಗೂ ಪ್ರಾಧ್ಯಾಪಕ ಕಾಂಚಾ ಐಲಯ್ಯ ಅವರ ನೂತನ ಕೃತಿ ಸ್ಮಗ್ಲುರ್ಲು ಕೊಮಾಟೊಲು (ವೈಶ್ಯರು ಸಾಮಾಜಿಕ ಸ್ಮಗ್ಲರ್‌ಗಳು) ವನ್ನು ನಿಷೇಧಿಸಬೇಕು ಎಂದು ವ್ಯಾಸ ಅಸೋಸಿಯೇಶನ್ ಆಗ್ರಹಿಸಿದೆ.
ಪುಸ್ತಕದ ಶೀರ್ಷಿಕೆ ಹಾಗೂ ಕೆಲವು ಅಂಶಗಳು ವೈಶ್ಯ ಸಮುದಾಯವನ್ನು ಅವಹೇಳನ ಮಾಡಿದೆ. ಆದುದರಿಂದ ಪುಸ್ತಕವನ್ನು ಕೂಡಲೇ ನಿಷೇಧಿಸಬೇಕು ಎಂದು ಅಸೋಶಿಯೇಶನ್ ಹೇಳಿದೆ.