×
Ad

ರಾಷ್ಟ್ರೀಯ ಪಿಂಚಣಿ ಯೋಜನೆ: ವಯೋಮಿತಿ 65ಕ್ಕೆ ಏರಿಕೆ

Update: 2017-09-11 22:56 IST

ಹೊಸದಿಲ್ಲಿ, ಸೆ. 5: ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೇರಲು ವಯೋಮಿತಿಯನ್ನು 60ರಿಂದ 65ಕ್ಕೆ ಏರಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಪ್‌ಆರ್‌ಡಿಎ) ಸೋಮವಾರ ಹೇಳಿದೆ.

ಇಂದಿಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪಿಎಫ್‌ಆರ್‌ಡಿಎಯ ಅಧ್ಯಕ್ಷ ಹೇಮಂತ್ ಕಾಂಟ್ರಾಕ್ಟರ್, ಈ ಬದಲಾವಣೆಗೆ ಪಿಂಚಣಿ ನಿಯಂತ್ರಣ ಮಂಡಳಿ ಈಗಾಗಲೆ ಅನುಮೋದನೆ ನೀಡಿದೆ ಹಾಗೂ ಈ ಬಗ್ಗೆ ಶೀಘ್ರದಲ್ಲಿ ಅಧಿಸೂಚನೆ ನೀಡಲಾಗುವುದು ಎಂದರು.

  ಈಗ ರಾಷ್ಟ್ರೀಯ ಪಿಂಚಣಿ ಯೋಜನೆ 18ರಿಂದ 60 ವರ್ಷದ ಜನರಿಗೆ ಮುಕ್ತವಾಗಿದೆ. ವಯೋಮಿತಿಯನ್ನು 65ಕ್ಕೆ ಏರಿಸಲು ಮಂಡಳಿ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ಗ್ರಾಹಕ ಸ್ನೇಹಿ ಹಾಗೂ ಎನ್‌ಪಿಎಸ್ ಅನ್ನು ಹೆಚ್ಚು ಆಕರ್ಷಣೀಯಗೊಳಿಸುವ ಮೂಲಕ ಪಿಂಚಣಿ ನಿಧಿಯನ್ನು ವರ್ಗಾಯಿಸುವ ಸೌಲಭ್ಯ ಒದಗಿಸುವುದು ಪಿಂಚಣಿ ಯೋಜನೆಯಲ್ಲಿ ಸುಧಾರಣೆ ತರುವ ಸರಕಾರದ ಉದ್ದೇಶದ ಹಿಂದಿರುವ ತಾರ್ಕಿಕತೆ ಎಂದು ಹೇಮಂತ್ ಕಾಂಟ್ರಾಕ್ಟರ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News