ಸೆ.13ರಂದು ಶ್ರೀಕೃಷ್ಣ ವೇಷ ಸ್ಪರ್ಧೆ
Update: 2017-09-11 23:04 IST
ಮಂಗಳೂರು, ಸೆ. 11: ಶ್ರೀ ಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸೆ.13ರಂದು ಶ್ರೀಕೃಷ್ಣ ವೇಷ ಸ್ಪರ್ಧೆ - ರಾಷ್ಟ್ರೀಯ ಮಕ್ಕಳ ಉತ್ಸವ -2017 ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 9:30ಕ್ಕೆ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ರಂಗೋಲಿಯಲ್ಲಿ ಶ್ರೀ ಕೃಷ್ಣ ರಚನೆ (ಸಾಂಪ್ರದಾಯಿಕ ಚುಕ್ಕಿ ರಂಗೋಲಿಗೆ ಆದ್ಯತೆ) ಸ್ಪರ್ಧೆ ಆಯೋಜಿಸಲಾಗಿದೆ.
ನಿಬಂಧನೆ: ರಂಗೋಲಿಯ ಅಳತೆ 3 ಅಡಿ 3 ಅಡಿ. ರಂಗೋಲಿ ರಚಿಸಲು 2 ಗಂಟೆ ಅವಧಿ. ಬಣ್ಣದ ಹುಡಿಯಲ್ಲಿ ಮಾತ್ರ ರಚಿಸತಕ್ಕದ್ದು. ಇದು ವೈಯಕ್ತಿಕ ಸ್ಪರ್ಧೆ (ಇತರರ ಸಹಾಯ ಪಡೆಯುವಂತಿಲ್ಲ).ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿವೆ.
1) ಬಾಲವಿಭಾಗ- 5,6,7,ನೇ ತರಗತಿ. 2) ಕಿಶೋರ ವಿಭಾಗ - 8, 9, 10ನೆ ತರಗತಿ. 3) ಮುಕ್ತ ವಿಭಾಗ- ಯಾವುದೇ ವಯೋಮಾನದವರು.
ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಬಣ್ಣ ಸಂಯೋಜನೆ ಮತ್ತು ರಂಗೋಲಿಯ ಒಟ್ಟು ಅಂದಕ್ಕೆ ಪ್ರಾಧಾನ್ಯತೆ ನೀಡಲಾಗುವುದು.