×
Ad

‘ಚೆನ್ನಮ್ಮ ಕೇಸರಿ’ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದ ಆಳ್ವಾಸ್‌ನ ಆತ್ಮಶ್ರೀ

Update: 2017-09-11 23:54 IST

ಮೂಡುಬಿದಿರೆ, ಸೆ. 11: ಜಮಖಂಡಿ ತಾಲೂಕಿನ ಕಂಬಾರಹಳ್ಳಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದ ಮಹಿಳಾ ವಿಭಾಗದ 57 ಕೆ.ಜಿ ಅಧಿಕ ದೇಹತೂಕ ವಿಭಾಗದಲ್ಲಿ ಆಳ್ವಾಸ್‌ನ ಆತ್ಮಶ್ರೀ ವಿಜೇತರಾಗುವುದರೊಂದಿಗೆ ನಾಲ್ಕನೇ ಬಾರಿ ‘ಚೆನ್ನಮ್ಮ ಕೇಸರಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಆಳ್ವಾಸ್‌ನ ಸಾವಕ್ಕ 57 ಕೆ.ಜಿ ವಿಬಾಗದಲ್ಲಿ ಪ್ರಥಮ, ಲಕ್ಷ್ಮೀ ರೆಡೇಕರ್ 53 ಕೆ.ಜಿ ವಿಭಾಗದಲ್ಲಿ ಪ್ರಥಮ, ಅಪರ್ಣಾ ಸಿದ್ದಿ 48 ಕೆ.ಜಿ ವಿಭಾಗದಲ್ಲಿ ದ್ವಿತೀಯ, ಮಹಾಲಕ್ಷ್ಮೀ 57 ಕೆ.ಜಿ ವಿಭಾಗದಲ್ಲಿ ತೃತೀಯ, ಸಹನಾ ಪಿ.ಎಸ್ 57 ಕೆ.ಜಿ ಅಧಿಕ ದೇಹತೂಕ ವಿಭಾಗದಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ.

ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News