ಸೆ.14: ತ್ವಲಾಖ್ ಮಾಹಿತಿ ಶಿಬಿರ; ಯಶಸ್ವಿಗೆ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಕರೆ
Update: 2017-09-12 17:22 IST
ಮಂಗಳೂರು, ಸೆ. 12: ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ಸೆ.14 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ತ್ವಲಾಖ್ ಬಗ್ಗೆ ಮಾಹಿತಿ ಶಿಬಿರ ನಡೆಯಲಿದೆ.
ಸುನ್ನೀ ಜಂ-ಇಯ್ಯತ್ತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಖಾಝಿ ಬೇಕಲ ಉಸ್ತಾದ್ ಸಮಗ್ರ ವಿವರಣೆ ನೀಡಲಿದ್ದು, ದ.ಕ. ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಕೂರತ್ ತಂಙಳ್ ದುಅಃ ಆಶಿರ್ವಚನ ನೀಡಲಿದ್ದಾರೆ. ಸುನ್ನೀ ಸಂಘ ಕುಟುಂಬಗಳ ನಾಯಕರು, ಕಾರ್ಯಕರ್ತರು, ಖತೀಬರು, ಸರ್ವ ಜಮಾಅತ್ ಕಮಿಟಿ ನಾಯಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.