ಮುಡಿಪು: ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ
ಕೊಣಾಜೆ, ಸೆ. 12: ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮುಡಿಪು ಶ್ರೀ ಭಾರತೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಶಿಕಲಾ ಹಾಗೂ ಕುರ್ನಾಡು ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಸವರಾಜ್ ಪಲ್ಲಕಿ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲಯನ್ಸ್ ಕ್ಲಬ್‌ನ ಉಪ ಗವರ್ನರ್ ದೇವದಾಸ ಭಂಡಾರಿಯವರು ವಿದ್ಯಾರ್ಥಿಗಳ ಮೂಲಕ ಸಮಾಜವನ್ನು ಕಟ್ಟುವವರು ಶಿಕ್ಷಕರಾಗಿದ್ದಾರೆ. ಆದ್ದರಿಂದ ನಾವು ಶಿಕ್ಷಕರನ್ನು ಸಮಾಜದಲ್ಲಿ ಗುರುತಿಸುವಂತಹ ಕೆಲಸ ಮಾಡಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಡಿಪು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರತ್ನಾಕರ ರೈ ಕಾಯೆರ್ ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್‌ನ ರಾಧಾಕೃಷ್ಣ ರೈ, ರವೀಂದ್ರ ರೈ, ಆತ್ಮರಾಮ ರೈ, ಲಯನೆಸ್ ಅಧ್ಯಕ್ಷರಾದ ಅನಸೂಯ, ಖಚಾಂಚಿ ದೇವಪ್ಪ ಆಳ್ವ, ಕಾರ್ಯದರ್ಶಿ ರಾಮಕೃಷ್ಣ ಭಟ್, ಡಾ.ಸುರೇಖಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.