ದಿಲ್ಲಿ ವಿವಿ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಎನ್ ಎಸ್ ಯುಐ ಜಯಭೇರಿ

Update: 2017-09-13 14:52 GMT

ಹೊಸದಿಲ್ಲಿ, ಸೆ.13: ದಿಲ್ಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದ ಕಾಂಗ್ರೆಸ್ ಬೆಂಬಲಿತ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ ಎಸ್ ಯುಐ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕೆಲ ವರ್ಷಗಳಿಂದ ಯುನಿಯನ್ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಈ ಬಾರೀ ಭಾರೀ ಮುಖಭಂಗಕ್ಕೊಳಗಾಗಿದ್ದು, ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಡಿಯುಎಸ್ ಯು ಅಧ್ಯಕ್ಷ ಸ್ಥಾನಕ್ಕೆ ಎಬಿವಿಪಿಯಿಂದ ರಜತ್ ಚೌಧರಿ, ಎಐಎಸ್ ಎಯಿಂದ ಪರೂಲ್ ಚೌಹಾ, ಸ್ವತಂತ್ರ ಅಭ್ಯರ್ಥಿಗಳಾಗಿ ರಾಜಾ  ಚೌಧರಿ ಹಾಗೂ ಅಲ್ಕಾ ಸ್ಪರ್ಧಿಸಿದ್ದು, ಎನ್ ಎಸ್ ಯುಐಯ ರಾಕಿ ತುಷೀದ್ ಜಯ ಗಳಿಸಿದ್ದಾರೆ.

“ಆರೆಸ್ಸೆಸ್ ನ ವಿಷಕಾರಿ ಹಾಗೂ ವಿಭಜನಾತ್ಮಕ ಸಿದ್ಧಾಂತವನ್ನು ದೇಶಾದ್ಯಂತ ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ ಎಂದು ಈ ಫಲಿತಾಂಶ ತೋರಿಸಿದೆ” ಎಂದು ಎನ್ ಎಸ್ ಯುಐ ಪ್ರತಿಕ್ರಿಯಿಸಿದೆ. 

ಕಳೆದ ವರ್ಷ ಎಬಿವಿಪಿ ಮೂರು ಸ್ಥಾನಗಳಲ್ಲಿ ಗೆದ್ದಿದ್ದರೆ, ಎನ್ ಎಸ್ ಯುಐ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News