ಸನಾತನ ಸಂಸ್ಥೆಯಿಂದ ಬೋಧನೆ ಆರೋಪ: ಸಿಎಫ್ಐಯಿಂದ ಶಿಕ್ಷಣಾಧಿಕಾರಿಗೆ ಮನವಿ

Update: 2017-09-13 15:08 GMT

ಬೆಳ್ತಂಗಡಿ, ಸೆ. 13: ಇಲ್ಲಿನ ಸರಕಾರಿ ಶಾಲೆಯೊಂದರಲ್ಲಿ  ಸನಾತನ ಸಂಸ್ಥೆ ಅನಧಿಕೃತವಾಗಿ ಬೋಧನೆ ಮಾಡುತ್ತಿರುವುದಾಗಿ ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಸಮಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದೆ.

ನೆರಿಯ ಸರಕಾರಿ ಶಾಲೆಯಲ್ಲಿ ಸನಾತನ ಸಂಸ್ಥೆಯೊಂದು ಬೋಧನೆ ಮಾಡುತಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆ ಹಂಚಿ ಪ್ರತಿ ಶನಿವಾರ ಪರೀಕ್ಷೆ ನಡೆಸುತ್ತಿದೆ. ಇದು ಮಕ್ಕಳಲ್ಲಿ ಮತೀಯ ಭಾವನೆ ಉಂಟು ಮಾಡುವುದರಿಂದ  ಈ ಕ್ರಮವನ್ನು ತಕ್ಷಣವೇ ನಿಷೇಧಿಸಬೇಕಾಗಿ ಹಾಗೂ  ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಶಿಕ್ಷಣ ಸಂಸ್ಥೆಯಿಂದ ಅಮಾನತು ಮಾಡಬೇಕು ಎಂದು ಸಿಎಫ್ಐ ಆಗ್ರಹಿಸಿದೆ.  ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆಂದು  ಶಿಕ್ಷಣ ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಸಿಎಫ್ಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News