ವಿಚಾರವಾದಿ ಜಿಗ್ನೇಶ್ ಮೆವಾನಿ ವಿರುದ್ದ ದೂರು

Update: 2017-09-13 15:24 GMT

ಪುತ್ತೂರು, ಸೆ. 13: ಬೆಂಗಳೂರಿನಲ್ಲಿ ನಡೆದ 'ನಾನು ಗೌರಿ' ಎಂಬ ಪ್ರತಿರೋಧ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯು ಪತ್ರಕರ್ತೆ ಗೌರಿ ಲಂಕೇಶ್  ಕೊಲೆಗೆ ಕಾರಣ ಎಂದು ಅರೋಪಿಸಿದ ಹಾಗೂ ಮೋದಿ ತಾಯಿಯ ಬಗ್ಗೆ ಅತ್ಯಂತ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಾರೆ ಎಂದು ವಿಚಾರವಾದಿ ಜಿಗ್ನೇಶ್ ಮೆವಾನಿ ವಿರುದ್ಧ  ಪುತ್ತೂರಿನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಮೋದಿ ನೀಚ ಮನಸ್ಸಿನ ನಾಯಕ, ಇಂತಹ ನಾಲಾಯಕ್ ಮಗನಿಗೆ ಏಕೆ ಜನ್ಮ ನೀಡಿದ್ದೀರಿ ಎಂಬುದಾಗಿ ಪ್ರಧಾನಿಯ ತಾಯಿ ಬಳಿ ಪ್ರಶ್ನಿಸೋಣ ಎಂಬ ಹೇಳಿಕೆಯನ್ನು ವಿಚಾರವಾದಿ ಜಿಗ್ನೇಶ್ ಮೆವಾನಿ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಲ್ಲದೆ,  ಪತ್ರಕರ್ತೆ ಗೌರಿ ಲಂಕೇಶ್  ಕೊಲೆ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದಾಗಿ ದೂರಿನಲ್ಲಿ  ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News