ಪತ್ರಕರ್ತರ ಮೇಲೆ ದೌರ್ಜನ್ಯ: ಪುತ್ತೂರು ಪತ್ರಕರ್ತರ ಸಂಘ ಖಂಡನೆ

Update: 2017-09-13 15:31 GMT

ಪುತ್ತೂರು, ಸೆ. 13: 'ವಾರ್ತಾಭಾರತಿ' ಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಝ್ ಶಾ ಬಂಧನ ಪ್ರಕರಣ ಮತ್ತು ಮಂಗಳೂರಿನ ದೃಶ್ಯ ಮಾಧ್ಯಮದ ವರದಿಗಾರರ ಮೇಲೆ ನಡೆದ ಹಲ್ಲೆಯನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘ  ಖಂಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ದೌರ್ಜನ್ಯ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಪುತ್ತೂರು ಸಹಾಯಕ ಕಮಿಷನರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ದೃಶ್ಯಮಾಧ್ಯಮದ ವರದಿಗಾರನ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಹಾಗೂ ಬಂಟ್ವಾಳದ ಪತ್ರಕರ್ತ ನನ್ನು ಪೊಲೀಸರು ಬಂಧಿಸಿದ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ಪ್ರಕರಣದ ನೈಜತೆಯನ್ನು ಅರಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಉಪಾಧ್ಯಕ್ಷ ಅನೀಶ್ ಕುಮಾರ್ ಮರೀಲು, ಸದಸ್ಯರುಗಳಾದ ಮೇಘಾ ಪಾಲೆತ್ತಾಡಿ, ಶಶಿಧರ್ ರೈ ಕುತ್ಯಾಳ, ಸಂಶುದ್ದಿನ್ ಸಂಪ್ಯ, ಕೃಷ್ಣಪ್ರಸಾದ್ ಬಲ್ನಾಡು, ಪ್ರವೀಣ್ ಕುಮಾರ್ ಬೊಳುವಾರು, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News