16ನೆ ಶತಮಾನದ ಮಸೀದಿಗೆ ಭೇಟಿ ನೀಡಿದ ಮೋದಿ, ಶಿಂಜೊ ಅಬೆ

Update: 2017-09-13 16:02 GMT

ಅಹ್ಮದಾಬಾದ್, ಸೆ.13: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೊ ಅಬೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆಗೂಡಿ 16ನೆ ಶತಮಾನದ, ಪ್ರಸಿದ್ಧ ಸಿದಿ ಸೈಯದ್ ಕಿ ಜಾಲಿ ಮಸೀದಿಗೆ ಭೇಟಿ ನೀಡಿದ್ದಾರೆ.

ವಿಭಿನ್ನ ವಿನ್ಯಾಸದ ಕಿಟಕಿಗಳಿಂದ ಪ್ರಸಿದ್ಧವಾದ 16ನೆ ಶತಮಾನದ ಮಸೀದಿಗೆ ಶಿಂಜೊ ಅಬೆ ಹಾಗೂ ಅವರ ಪತ್ನಿ ಅಕೀ ಅಬೆಯವರನ್ನುಮೋದಿ ಸ್ವಾಗತಿಸಿದರು.

ಗುಜರಾತ್ ಸುಲ್ತಾನ್ ಗಳ ಕೊನೆಯ ಸುಲ್ತಾನ ಶಂಸುದ್ದೀನ್ ಮುಝಫ್ಫರ್ ಶಾ ಅವರ ಸೇನೆಯ ಮುಖ್ಯಸ್ಥರಾಗಿದ್ದ ಅಹ್ಮದ್ ಶಾ ಬಿಲಾಲ್ ಝಾಜರ್ ಖಾನ್ ಮುಂದಾಳತ್ವದಲ್ಲಿ 1573ರಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿತ್ತು.

ಮಸೀದಿ ಭೇಟಿಯ ನಂತರ ಪ್ರಧಾನಿ ಮೋದಿ ಜಪಾನ್ ಪ್ರಧಾನಿ ಹಾಗೂ ಅವರ ಪತ್ನಿಯನ್ನು ಸಮೀಪದ ಪಾರಂಪರಿಕ ಸ್ಥಳಗಳಿಗೆ ಕರೆದೊಯ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News