ಸಿಂಗಾಪುರದ ನೂತನ ಅಧ್ಯಕ್ಷೆಯಾಗಿ ಹಲೀಮಾ

Update: 2017-09-13 16:19 GMT

ಸಿಂಗಾಪುರ, ಸೆ. 13: ಸಿಂಗಾಪುರ ಸಂಸತ್ತಿನ ಮಾಜಿ ಸ್ಪೀಕರ್ ಹಲೀಮಾ ಯಾಕೂಬ್ ಸಿಂಗಾಪುರದ ಅಧ್ಯಕ್ಷೆಯಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಅವರು ದೇಶದ ಪ್ರಥಮ ಮಹಿಳಾ ಅಧ್ಯಕ್ಷರು ಆಗಿದ್ದಾರೆ.

ಅವರು ಸ್ಪರ್ಧೆಗೆ ಅರ್ಹತೆ ಹೊಂದಿದ ಏಕೈಕ ಅಭ್ಯರ್ಥಿ ಎಂಬುದಾಗಿ ಚುನಾವಣಾಧಿಕಾರಿ ಘೋಷಿಸಿದ ಬಳಿಕ ಅವರು ಅಧ್ಯಕ್ಷೆಯಾಗಿ ಆಯ್ಕೆಯಾದರು.

ದೇಶದ ವಿವಿಧ ಸಮುದಾಯಗಳ ನಡುವಿನ ಏಕತೆಯನ್ನು ಬಲಪಡಿಸುವುದಕ್ಕಾಗಿ ಈ ಬಾರಿ ಅಲ್ಪಸಂಖ್ಯಾತ ಮಲಯ ಸಮುದಾಯಕ್ಕೆ ಎಂಬ ನಿರ್ಧಾರವನ್ನು ಸಿಂಗಾಪುರ ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

 ‘‘ಇದು ಮೀಸಲಾತಿಯ ಚುನಾವಣೆ ಆಗಿದ್ದರೂ, ನಾನು ಮೀಸಲಾತಿಯ ಅಧ್ಯಕ್ಷೆಯಲ್ಲ’’ ಎಂಬುದಾಗಿ ಚುನಾವಣಾ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಹಲೀಮಾ ಘೋಷಿಸಿದರು.

‘‘ನಾನು ಎಲ್ಲರ ಅಧ್ಯಕ್ಷೆ’’ ಎಂದರು. ಸಿಂಗಾಪುರದಲ್ಲಿ ಅಧ್ಯಕ್ಷತೆ ಅಲಂಕಾರಿಕ ಹುದ್ದೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News