×
Ad

ಗಾಂಜಾ ಸೇವನೆ: ಆರು ಮಂದಿ ವಿರುದ್ಧ ದೂರು

Update: 2017-09-13 21:59 IST

ಉಡುಪಿ, ಸೆ. 13: ಮಣಿಪಾಲ ಪೊಲೀಸರು ಇಂದು ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಣಿಪಾಲ ಪರಿಸರದಲ್ಲಿ ಗಾಂಜಾ ಸೇವನೆ ಮಾಡುತಿದ್ದ ಆರು ಮಂದಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಐವರು ಸ್ಥಳೀಯ ವಿದ್ಯಾರ್ಥಿಗಳಾದರೆ, ಓರ್ವ ಮಲೇಷಿಯಾದ ಫಿಸಿಯೋಥೆರಪಿ ವಿದ್ಯಾರ್ಥಿನಿಯೂ ಸೇರಿದ್ದಾರೆ.

ಆರು ಮಂದಿ ಗಾಂಜಾ ವ್ಯಸನಿಗಳ ವೈದ್ಯಕೀಯ ತಪಾಸಣೆ ನಡೆದಿದ್ದು, ಇವರು ಮಾದಕ ದ್ರವ್ಯ ಸೇವಿಸಿರುವುದು ದೃಢ ಪಟ್ಟಿದೆ. ಮಣಿಪಾಲದಲ್ಲಿ ಮಾದಕ ವಸ್ತುಗಳ ಸೇವನೆಯ ಕುರಿತಂತೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಎಂ.ಪಾಟೀಲ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಎಲ್ಲಿಂದ ಮಾದಕ ವಸ್ತು ಪೂರೈಕೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಮಾದಕ ವಸ್ತುಗಳ ಸಾಗಾಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ. ಅಲ್ಲದೇ ವಾರಾಂತ್ಯದ ವೇಳೆ ಭಾರೀ ಚಟುವಟಿಕೆಯಿಂದ ಇರುವ ‘ಕೆಲವು ಪ್ಲಾಟ್’ಗಳ ಮೇಲೂ ಹದ್ದಿನ ಕಣ್ಣಿಡುವುದಾಗಿ ಅವರು ಹೇಳಿದ್ದಾರೆ.

ಆರು ಮಂದಿಯಲ್ಲಿ ಇಬ್ಬರನ್ನು ಇಂದು ಬೆಳಗ್ಗೆ 8:20ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಹಾಡಿಯಲ್ಲಿ ಹಾಗೂ ಇನ್ನಿಬ್ಬರನ್ನು 9:35ರ ಸುಮಾರಿಗೆ ಮಣಿಪಾಲದಲ್ಲಿ ಅರ್ಬಿ ಫಾಲ್ಸ್‌ಗೆ ತೆರಳುವ ಮಾರ್ಗದಲ್ಲಿ ಪತ್ತೆ ಹಚ್ಚಲಾಗಿದೆ. ಸಾತ್ವಿಕ್ ಮೊಹಂತಿ (21), ರಾಘವ್ ತನೇಜಾ (22), ಶಿವಾಂಕ್ ಶೇಖರ್ (21) ಮತ್ತು ಸುಯಶ್ ಸಿಂಗ್ (20) ಅವರ ಮೇಲೆ ಮಾದಕ ವಸ್ತು ಗಾಂಜಾವನ್ನು ಸೇವನೆಗಾಗಿ ಎನ್‌ಡಿಪಿಎಸ್ ಕಾಯ್ದೆಯಡಿ ಮಣಿಪಾಲ ಇನ್ಸ್‌ಪೆಕ್ಟರ್ ಸುದರ್ಶನ್ ಎಂ. ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News