×
Ad

ಎಸ್.ಐ.ಸಿ. ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Update: 2017-09-13 22:31 IST

ಮಂಗಳೂರು, ಸೆ. 13: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಎಸ್‌ಐಸಿ ಕಿನ್ಯ ಇದರ ವಾರ್ಷಿಕ ಮಹಾಸಭೆಯು ಸೈಯ್ಯದ್ ಅಮೀರ್ ತಂಙಳ್‌ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಹಾರೂನ್ ಅಹ್ಸನಿ ಉದ್ಘಾಟಿಸಿದರು. ಕೆ. ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಸೈಯ್ಯದ್ ಅಮೀರ್ ತಂಙಳ್, ಸೈಯ್ಯದ್ ಬಾತಿಷ್ ತಂಙಳ್, ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕಾಯಿಂಞಿ ಹಾಜಿ, ಉಪಾಧ್ಯಕ್ಷರಾಗಿ ಹಾರೂನ್ ಅಹ್ಸನಿ ಕಿನ್ಯ, ಅಬ್ಬೂ ಹಾಜಿ, ಮೊದಿನ್ ಮಿಂಪ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಫೈಝಿ, ಜೊತೆ ಕಾರ್ಯದರ್ಶಿಗಳಾಗಿ ಆರಿಫ್ ಎಂ. ಎನ್., ಹಮೀದ್ ಕುತುಬಿಯಾನಗರ, ಸಿರಾಜುದ್ದೀನ್ ಶಾಫಿ, ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹೀಂ ಸಾಗ್, ಸಂಚಾಲಕರಾಗಿ ಫಾರೂಕ್ ಕುತುಬಿಯಾನಗರ, ಸುಹೈಲ್ ಕೂಡಾರ, ಕಚೇರಿ ಕಾರ್ಯದರ್ಶಿಯಾಗಿ ಟಿ. ಎಂ.ಮುಹಮ್ಮದ್, ಕೋಶಾಧಿಕಾರಿಯಾಗಿ ಕೆ.ಎಸ್.ಶೇಖಬ್ಬ ಹಾಜಿ, ಮಜ್ಲಿಸುನ್ನೂರ್ ಅಮೀರ್ ಆಗಿ ಅಮೀರ್ ತಂಙಳ್ ಮೊದಲಾವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಗೆ 25 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಕಾರ್ಯದರ್ಶಿ ಮುಸ್ತಫಾ ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News