×
Ad

ಭಟ್ಕಳ: ರೋಹಿಂಗ್ಯ ಮುಸ್ಲಿಮರ ರಕ್ಷಣೆಗೆ ಆಗ್ರಹಿಸಿ ಎಸ್.ಡಿ.ಪಿ.ಐ ಧರಣಿ

Update: 2017-09-13 23:05 IST

ಭಟ್ಕಳ, ಸೆ. 13: ಮಯನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಮರ ರಕ್ಷಣೆ ಮಾಡಬೇಕು, ಅಲ್ಲಿ ನ್ಯಾಯಾ ಮತ್ತು ಶಾಂತಿಯನ್ನು ಸ್ಥಾಪಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಮಯನ್ಮಾರ್ ನಲ್ಲಿ ಬುದ್ಧಿಸ್ಟರ ಸರ್ಕಾರ ಮುಸ್ಲಿಮರ ಮೇಲೆ ಅತ್ಯಾಚಾರ ಮಾಡುತ್ತಿದೆ. ಅವರನ್ನು ದೇಶದಿಂದ ಹೊರಹಾಕುವ ಮೂಲಕ ಇದು ಅಂತಾ ರಾಷ್ಟ್ರೀಯ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ರೋಹಿಂಗ್ಯನ್ನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು, ಅವರನ್ನು ಮಾನವರಂತೆ ಕಾಣಬೇಕು, ಯು.ಎನ್.ಒ ಮಧ್ಯಸ್ಥಿಕೆ ವಹಿಸುವುದರ ಮೂಲಕ ಅಲ್ಲಿ ಶಾಂತಿ ಸ್ಥಾಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತುರ್ಕಿ ಅಧ್ಯಕ್ಷರ ಕ್ರಮವನ್ನು ಸ್ವಾಗತಿಸಿದ ಎಸ್.ಡಿ.ಪಿ.ಐ ಭಾರತ ಸರ್ಕಾರವು ಸಹ ರೋಹಿಂಗ್ಯ ಮುಸ್ಲಿಮರ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆಯನ್ನು ವಹಿಸಬೇಕೆಂದು ಮನವಿಯಲ್ಲಿ ತಿಳಿಸಿದೆ. 

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮುಖಂಡರಾದ ಝಹಿರ್ ಆಹಮದ್ ಶೇಖ್, ಯೂಸೂಫ್ ಮುಲ್ಲಾ, ಸರ್ಫರಾಝ್ ಖಾನ್, ಅಝೀಮ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News