×
Ad

ಬ್ಯಾರಲ್ ಸ್ಫೋಟ : ನಮ್ಮನ್ನು ದೂರಬೇಡಿ; ಮದ್ದುಗುಂಡು ಉತ್ಪಾದಕರು

Update: 2017-09-13 23:13 IST

ಹೊಸದಿಲ್ಲಿ, ಸೆ. 13: ಕೆಲವು ದಿನಗಳ ಹಿಂದೆ ಭಾರತ ಬ್ರಾಂಡ್‌ನ ನೂತನ ಅತಿ ಹಗುರ ಹಾಗೂ ದೀರ್ಘ ವ್ಯಾಪ್ತಿಯ ಪಿರಂಗಿ ಹೋವಿಟ್ಸ್‌ರ್‌ನ ಪರೀಕ್ಷೆ ವೇಳೆ ಬ್ಯಾರಲ್ ಸ್ಫೋಟಗೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇನೆ, ಗೃಹ ಉತ್ಪಾದನೆಯ ಮದ್ದುಗುಂಡು ಸ್ಫೋಟಕ್ಕೆ ಕಾರಣ ಎಂದು ಮಂಗಳವಾರ ಹೇಳಿತ್ತು.

ಆದರೆ ಇಂದು ಸೇನೆ, ರಾಜ್ಯ ಸ್ವಾಮಿತ್ವದ ಮದ್ದು ಗುಂಡು ಉತ್ಪಾದಕರು ಸೇನೆಗೆ ಪೂರೈಸಿದ ಮದ್ದುಗುಂಡುಗಳಲ್ಲಿ ಶೇ. 90 ಮಾತ್ರ ಬಳಕೆಯಾಗುತ್ತದೆ. ಈ ವಿಫಲತೆ ಅಸಹಜವೇನಲ್ಲ ಎಂದಿದೆ.

ಹೋವಿಟ್ಜರ್ ಗನ್‌ನಲಿ 110 ಸುತ್ತು ಫೈರ್ ಮಾಡಲಾಗಿದೆ. 116ನೇ ಸುತ್ತಿನಲ್ಲಿ ಅದರ ಬ್ಯಾರಲ್ ಸ್ಫೋಟಗೊಂಡಿತ್ತು. ಈ ವಿಫಲತೆಯ ಮಟ್ಟ ಸ್ವೀಕಾರಾರ್ಹ ಎಂದು ಮದ್ದು ಗುಂಡು ಉತ್ಪಾದಕ ಸಂಸ್ಥೆಯ ವಕ್ತಾರ ಡಾ. ಯು. ಮುಖರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News