ಶರೀಅತ್ ಸಂರಕ್ಷಣಾ ಸಂಗಮ: ಯಶಸ್ವಿಗೊಳಿಸಲು ದ.ಕ. ಜಿಲ್ಲಾ ಅಝ್ಹರೀಸ್ ಅಸೋಸಿಯೇಷನ್ ಕರೆ
Update: 2017-09-13 23:16 IST
ಮಂಗಳೂರು, ಸೆ. 13: ಸಂವಿಧಾನ ದತ್ತವಾದ ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆಗಾಗಿ ಮತ್ತು ರೋಹಿಂಗ್ಯ ಮುಸಲ್ಮಾನರ ಮಾರಣ ಹೋಮ ಖಂಡಿಸಿ ಎಸ್.ಕೆ.ಎಸ್.ಎಸ್.ಎಫ್. ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಸೆ.15ರಂದು ಮಧ್ಯಾಹ್ನ 3:30ಕ್ಕೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಝ್ಹರೀಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.