×
Ad

ಅಮರನಾಥ ಯಾತ್ರಿಕರ ಮೇಲಿನ ಭಯೋತ್ಪಾದಕ ದಾಳಿಯ ರೂವಾರಿಯ ಹತ್ಯೆ

Update: 2017-09-14 18:55 IST

ಹೊಸದಿಲ್ಲಿ, ಸೆ.14: ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಅಬು ಇಸ್ಮಾಯೀಲ್ ಎಂಬಾತನನ್ನು ಇಂದು ಭದ್ರತಾ ಪಡೆಗಳು ಹೊಡೆದುರುಳಿಸಿದೆ.

“ಲಷ್ಕರ್ ಎ ತೊಯ್ಬಾ ಉಗ್ರ ಅಬು ಇಸ್ಮಾಯೀಲ್ ಹಾಗೂ ಆತನ ಸಹಚರರನ್ನು ನವ್ ಗಾಂನಲ್ಲಿ ಕೊಲ್ಲಲಾಗಿದೆ” ಎಂದು ಜಮ್ಮಿ ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈತ ಅಮರನಾಥ ಯಾತ್ರರ್ಥಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ. ಈ ದಾಳಿಯಲ್ಲಿ 7 ಯಾತ್ರಾರ್ಥಿಗಳು ಮೃತಪಟ್ಟು 19 ಮಂದಿ ಗಾಯಗೊಂಡಿದ್ದರು.

ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿಯ ನಂತರ ಅವರಿದ್ದ ಸ್ಥಳವನ್ನು ಸುತ್ತುವರಿದು ನಂತರ ದಾಳಿ ನಡೆಸಲಾಯಿತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News