ಜಮೀಯತುಲ್ ಫಲಾಹ್: ಸುಳ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

Update: 2017-09-14 14:36 GMT

ಮಂಗಳೂರು, .ಸೆ.14: ಜಮೀಯತುಲ್ ಫಲಾಹ್ ಸುಳ್ಯ ಘಟಕದ 2017-19ನೆ ಸಾಲಿನ ನೂತನ ಅಧ್ಯಕ್ಷರಾಗಿ ಹಾಜಿ ಎಚ್.ಎ.ಅಬ್ಬಾಸ್ ಸಂಟ್ಯಾರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹಾಜಿ ಪಿ.ಎ.ಮುಹಮ್ಮದ್ ಮತ್ತು ಹಸೈನಾರ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ. ಮೂಸಾ ಕುಂಞ, ಕೋಶಾಧಿಕಾರಿಯಾಗಿ ಹಾಜಿ ಬೀರಾ ಮೊಹಿದ್ದೀನ್, ಜೊತೆ ಕಾರ್ಯದರ್ಶಿಯಾಗಿ ಅಮೀರ್ ಕುಕ್ಕಂಬಳ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಜನತಾ ಹಾಗೂ ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಎಣ್ಮೂರು ಆಯ್ಕೆಯಾಗಿದ್ದಾರೆ.

ಸುಳ್ಯದ ಗಾಂಧಿನಗರದ ಮಲ್ನಾಡ್ ಚ್ಯಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಘಟಕದ ಅಧ್ಯಕ್ಷ ಕೆ.ಎ.ಅಬ್ಬಾಸ್ ಕಟ್ಟೆಕಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ 29ನೆ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.

ಸಭೆಯಲ್ಲಿ ಕಾರ್ಯದರ್ಶಿ ಬೀರಾನ್ ಮುಹಮ್ಮದ್ ಹತ ಸಭೆಯ ವರದಿ ಮಂಡಿಸಿದರು. ಕೋಶಾಧಿಕಾರಿ ಪಿ.ಎ.ಮುಹಮ್ಮದ್ ಹಾಜಿ ಲೆಕ್ಕಪತ್ರ ಮಂಡಿಸಿದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News