×
Ad

ಉದ್ಯಾವರ: ಶರೀರದ ಆವಯವಗಳ ಪ್ರದರ್ಶನ

Update: 2017-09-14 20:14 IST

ಉಡುಪಿ, ಸೆ.14: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಶರೀರ ರಚನಾ ವಿಭಾಗದ ವತಿಯಿಂದ ‘ನಿದರ್ಶನಂ’ ಎಂಬ ಶರೀರದ ಆಂತರಿಕ(ಆವಯವಗಳ) ಅಂಗಾಂಗಗಳ ಪ್ರದರ್ಶನವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಶಿರ್ವದ ಸೈಂಟ್ ಲಾರೆನ್ಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ಕ್ಲಬ್‌ನ ಸದಸ್ಯರು ಸಂದರ್ಶಿಸಿ ಶರೀರದ ಆಂತರಿಕ ಆವಯವಗಳ ಮಾಹಿತಿ ಪಡೆದರು. ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಎನ್., ಸಹಪ್ರಾಧ್ಯಾಪಕ ಡಾ.ಪ್ರಹ್ಲಾದ್ ಡಿ.ಎಸ್., ಉಪನ್ಯಾಸಕರಾದ ಡಾ.ನಿತಿನ್ ಕುಮಾರ್, ಡಾ.ಹರ್ಷಿತಾ ಎಂ.ಎಸ್., ಡಾ.ರಶ್ಮಿ ಎನ್.ಆರ್. ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು.

ಸ್ನಾತಕ್ಕೋತ್ತರ ವಿದ್ಯಾರ್ಥಿಗಳಾದ ಡಾ.ಅಂಜು, ಡಾ.ಪ್ರಿಯಾಂಕ ಹಾಗೂ ಡಾ. ಇಂಧುಶ್ರೀ ಸಹಕರಿಸಿದರು. ಶಿರ್ವದ ಸೈಂಟ್ ಲಾರೆನ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕೆ.ಜೆ.ಶರ್ಮ, ದಿಲೀಪ್ ಕುಮಾರ್, ಅರುಣ್ ಕುಮಾರ್, ಜೆಸಿಂತಾ ದಾಂತಿ, ಅಶ್ವಿನಿ, ಮಾಲತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News