ನೊಂದವರಿಗೆ ಸಾಂತ್ವಾನ ಮೂಡಿಸುವುದು ಪುಣ್ಯ ಕಾರ್ಯ : ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್
ಪುತ್ತೂರು, ಸೆ. 14: ಬಡ ನಿರ್ಗತಿಕರಿಗೆ ನೆರವಾಗಿ ಅವರ ಕಣ್ಣೀರಲ್ಲಿ ಕನಸು ತುಂಬುವುದು, ನೊಂದವರಲ್ಲಿ ಸಾಂತ್ವಾನ ಮೂಡಿಸುವುದು, ದು:ಖಿತರಲ್ಲಿ ಸಂತಸ ತುಂಬುವುದು, ಸ್ವಾಸ್ಥ ನಾಡು ಹಾಗೂ ಸಮಾಜ ಕಟ್ಟುವಲ್ಲಿ ತೊಡಗಿಸಿಕೊಳ್ಳುವುದು ಇಸ್ಲಾಮಿನಲ್ಲಿ ಶ್ರೇಷ್ಠ ಕಾರ್ಯವಾಗಿದ್ದು ವಿಶ್ವೋತ್ತರ ವಿದ್ವಾಂಸ ಶೈಖುನಾ ಸಂಶುಲ್ ಉಲಮಾರ ಸ್ಮರಣಾರ್ಥವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಉತ್ಸಾಹಿ ತಂಡ ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದು ದ ಕ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಅವರು ಗುರುವಾರ ಪುತ್ತೂರು ಪುರಭವನದಲ್ಲಿ ನಡೆದ ಸಂಶುಲ್ ಉಲಮಾ ಸೋಶಿಯಲ್ ಟ್ರಸ್ಟ್ ಸಂಸ್ಥೆಯ ಅಧಿಕೃತ ಉದ್ಘಾಟನೆ , ಮಜ್ಲಿಸುನ್ನೂರು , ಪ್ರಮಾಣ ಪತ್ರ ಸ್ವೀಕಾರ ಹಾಗೂ ಪ್ರತಿಜ್ಞಾ ವಿಧಿ ಭೋದನೆಯ ಕಾರ್ಯಕ್ರಮದಲ್ಲಿ ದುವಾಶೀರ್ವಚನ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೂರ್ನಡ್ಕ ಮಸೀದಿ ಮುದರ್ರಿಸ್ ಅಬೂಬಕ್ಕರ್ ಸಿದ್ದಿಕ್ ಜಲಾಲಿ ಮಾತನಾಡಿ ಬಡವರನ್ನು ಸಂದರ್ಶಿಸುವುದು, ಅವರಿಗೆ ಸಹಾಯ ಮಾಡುವುದು ಅವರಲ್ಲಿ ದೇವರನ್ನು ಕಾಣುವುದು ಪುಣ್ಯದಾಯಕ ಕಾರ್ಯವಾಗಿದೆ. ಬಡವರ ಏಳಿಗೆಗೆ ಸಂಘಟನೆ ಪುತ್ತೂರಿನಲ್ಲಿ ಈ ರೀತಿಯ ಸಾಮಾಜಿಕ ಕಳಕಳೀಯ ಸಂಘಟನೆಯನ್ನು ಪ್ರಾರಂಭ ಮಾಡುವ ಮೂಲಕ ಬಡವರಲ್ಲಿ ಆಶಾದಾಯಕ ವಾತಾವರಣವನ್ನು ಮೂಡಿಸಿದ್ದಾರೆ. ಸಂಘಟನೆಯ ಕಾರ್ಯವನ್ನು ದೇವನು ಖಂಡಿತವಾಗಿಯೂ ಸ್ವೀಕರಿಸುತ್ತಾನೆ ಎಂಬ ನಂಬಿಕೆ ನಿಮ್ಮಲ್ಲಿರಲಿ ಎಂದು ಹೇಳಿದರು.
ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಮಾಡನ್ನೂರು ನೂರುಲ್ ಹುದಾ ಅಕಾಡಮಿಯ ಪ್ರಾಂಶುಪಾಲ ನ್ಯಾಯವಾದಿ ಹನೀಫ್ ಹುದವಿ ಮಾತನಾಡಿ ಒಳಿತಿನ ಕಾರ್ಯಗಳ ಮೂಲಕ ಸರ್ವರಿಗೂ ನೆರವಾಗುವುದು ಮುಸ್ಲಿಂ ವಿಶ್ವಾಸಿಯ ಕರ್ತವ್ಯವಾಗಿದೆ. ಖಂಡಿತವಾಗಿಯೂ ನೈಜ ಮುಸ್ಲಿಂ ಉಗ್ರವಾದಿ ಆಗಲಾರ, ದುರಂತ ಸಂಭವಿಸುವಾಗ ಜಾತಿ ಧರ್ಮ ನೋಡದೆ ಮುಸ್ಲಿಂ ವಿಶ್ವಾಸಿಗಳು ಜಾತಿ ಧರ್ಮ ನೋಡದೆ ನೆರವಿಗೆ ಸಾಧಿಸುವುದಕ್ಕೆ ಧರ್ಮ ಸಂದೇಶವೇ ಕಾರಣವಾಗಿದೆ ಎಂದು ಹೇಳಿದರು.
ರಾಜ್ಯ ಎಸ್ಕೆ ಎಸ್ಸೆಸ್ಸೆಫ್ ಅಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾ ಮದ್ರಸ ಮೆನೇಜ್‌ಮೆಂಠ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಕಡಬ, ಅಬ್ಬಾಸ್ ದಾರಿಮಿ ಕೆಲಿಂಜ, ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್. ಬಿ ಮುಹಮ್ಮದ್ ದಾರಿಮಿ, ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ರವರು ಸಂಶುಲ್ ಉಲಮ ಸೋಶಿಯಲ್ ಟ್ರಸ್ಟ್ ಲೋಗೋ ಬಿಡುಗಡೆ ಮಾಡಿದರು.
ಸಂಪ್ಯ ಅಬ್ದುಲ್ ಹಮೀದ್ ದಾರಿಮಿ, ಯಾಕೂಬ್ ದಾರಿಮಿ ಸವಣೂರು, ಶರೀಫ್ ಅರ್ಷದಿ ಮುಕ್ವೆ, ಮುಹಮ್ಮದಲಿ ದಾರಿಮಿ ಪರ್ಲಡ್ಕ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಶರೀಫ್ ದಾರಿಮಿ ಅಡ್ಡೂರು, ಮುಹಮ್ಮದ್ ಮುಸ್ಲಿಯಾರ್ ಕುಂಬ್ರ, ಖಲೀಲ್ ಅಬ್ದುಲ್ ರಹಿಮಾನ್ ದಾರಿಮಿ ಮಾಂತೂರು, ಕುಂಬ್ರ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ , ಹಕೀಂ ಪರ್ತಿಪ್ಪಾಡಿ, ಶರೀಫ್ ಮೂಸಾ ಕುದ್ದುಪದವು, ಸಂಶುದ್ದೀನ್ ಹನೀಫ್ ಕೆಐಸಿ ದುಬೈ ಕಮಿಟಿ ಉಪಸ್ಥಿತರಿದ್ದರು.
ಕುಂಬ್ರ ಕೆಐಸಿ ಮೆನೇಜರ್ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೋಶಿಯಲ್ ಟ್ರಸ್ಟ್‌ನ ಅಧ್ಯಕ್ಷ ಎಲ್. ಟಿ ರಝಾಕ್ ಹಾಜಿ , ಪ್ರ. ಕಾರ್ಯದರ್ಶಿ ಅಬೂಬಕ್ಕರ್ ಮುಲಾರ್ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು, ಕೋಡಿಂಬಾಡಿ ಮಸೀದಿ ಖತೀಬ್ ಕೆ ಎಂ ಎ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.
ಪುರಭವನದಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಯ್ಯದ್ ಎನ್ ಪಿ ಎಂ ಝೈನುಲ್ ಆಬಿದೀನ್ ತಂಙಳ್ ಪುತ್ರ ಸಯ್ಯದ್ ಅಲ್ ಬುಖಾರಿ ತಂಙಳ್ ಕುನ್ನುಂಗೈ ಹಾಗೂ ಯಾಹ್ಯಾ ತಂಙಳ್ ಕಬಕರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಂಙಳ್ ಬಡವರಿಗೆ, ನಿರ್ಗತಿಕರಿಗೆ ನೀಡುವ ನೆರವು ಇಹಪರ ವಿಜಯಕ್ಕೆ ಕಾರಣವಾಗಲಿದೆ , ಮಜ್ಲಿಸುನ್ನೂರು ಕಾರ್ಯಕ್ರಮ ಮಹತ್ವಪೂರ್ಣ ಕಾರ್ಯವಾಗಿದ್ದು ಇದು ಎಲ್ಲಾ ಕಾಲದಲ್ಲೂ ನಮಗೆ ಸುರಕ್ಷೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಬ್ದುಲ್ ಮಜೀದ್ ದಾರಿಮಿ, ಯಾಕೂಬ್ ದಾರಿಮಿ, ಕೆ ಎಂ ಎ ಕೊಡುಂಗಾಯಿ, ಉಮ್ಮರ್ ದಾರಿಮಿ , ಬಶೀರ್ ದಾರಿಮಿ ಕಲ್ಲೆಗ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಹುಸೈನ್ ದಾರಿಮಿ ರೆಂಜಲಾಡಿ, ಉಮರ್ ಫೈಝಿ ಸಾಲ್ಮರ, ಸಂಶುದ್ದೀನ್ ಹನೀಫಿ ಮೊದಲಾದವರು ಉಪಸ್ಥಿತರಿದ್ದರು.