ರಾಜ್ಯಕ್ಕೆ 6ನೆ ರ್ಯಾಂಕ್ ಗಳಿಸಿದ ಝೇಂಕಾರ ನೃತ್ಯ ಶಾಲೆ ವಿದ್ಯಾರ್ಥಿ
ಭಟ್ಕಳ, ಸೆ. 14: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ, ಬೆಂಗಳೂರು ಇವರು ನಡೆಸಿದ ಭರತನಾಟ್ಯ ಪರೀಕ್ಷೆಗೆ ಭಟ್ಕಳದ ಝೇಂಕಾರ ಸಂಸ್ಥೆಯಿಂದ ಜೂನಿಯರ್ ಮತ್ತು ಸೀನಿಯರ್ ವಿಭಾಗದಿಂದ ಒಟ್ಟೂ 15 ವಿದ್ಯಾರ್ಥಿಗಳು ಹಾಜರಾಗಿದ್ದು, ಸೀನಿಯರ್ ವಿಭಾಗದ ಧನಲಕ್ಷ್ಮೀ ರಾಮಚಂದ್ರ ಮೊಗೇರ, ಶಿರಾಲಿ 600 ಕ್ಕೆ 557 ಅಂಕವನ್ನು ಗಳಿಸುವ ಮೂಲಕ ರಾಜ್ಯಕ್ಕೆ ಆರನೇ ರ್ಯಾಂಕ್‌ನ್ನು ಗಳಿಸಿ ಝೇಂಕಾರ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನಿಯರ್ ವಿಭಾಗದಲ್ಲಿ ರಕ್ಷಾ ಭಾಸ್ಕರ ಪೈ 400 ಕ್ಕೆ 368 ಅಂಕವನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, 5 ವಿದ್ಯಾರ್ಥಿಗಳು ಡಿಸ್ಟಿಂಗ್‌ಷನ್‌ನಲ್ಲಿ ಹಾಗೂ ಉಳಿದ 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಪಡೆದಿದ್ದಾರೆ. ಅತ್ಯುತ್ತಮ ಫಲಿತಾಂಶಕ್ಕಾಗಿ ಸಂಸ್ಥೆಯ ಅಧ್ಯಕ್ಷ ಪಸನ್ನ ಪ್ರಭು ಹಾಗೂ ನೃತ್ಯ ಶಿಕ್ಷಕಿ ವಿದೂಷಿ ನಯನಾ ಪ್ರಸನ್ನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಶಂಶಿಸಿರುತ್ತಾರೆ.