ಬೈಕ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ
Update: 2017-09-14 22:09 IST
ಮಂಗಳೂರು, ಸೆ. 14: ಬೈಕ್ ಕಳವುಗೈದ ಮೂವರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಡುಶೆಡ್ಡೆ ನಿಸರ್ಗಧಾಮದ ನಿವಾಸಿ ನಾಗರಾಜ್(18), ಮೂಡುಶೆಡ್ಡೆಯ ದೇವಿಪ್ರಸಾದ್ (18) ಹಾಗೂ ಮೂಡುಶೆಡ್ಡೆ ಪಿಲಿಕುಳದ ಲಿಯೊ ಡಿಸೋಜಾ ಬಂಧಿತ ಆರೋಪಿಗಳು.
ಆರೋಪಿಗಳು ಕಳೆದ ಆಗಸ್ಟ್ 28ರಂದು ಕೂಳೂರಿನಲ್ಲಿ ಬೈಕ್ ಕಳವುಗೈದ ಪ್ರಕರಣದ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ.