ಜೆಎನ್‌ಯು, ಡಿಯುಗೆ ವಿದೇಶಿ ದೇಣಿಗೆ ರದ್ದು
Update: 2017-09-14 22:31 IST
ಹೌರಾಹ್, ಸೆ. 14: ಕಾನೂನು ಅನುಸರಣೆಗೆ ನಿರಾಕರಿಸುತ್ತಿರುವ ನೂರಾರು ಸಂಘಟನೆಗಳ ಬಗ್ಗೆ ಕೇಂದ್ರ ಸರಕಾರ ಕಟು ನಿಲುವು ತೆಗೆದುಕೊಂಡಿರುವುದರಿಂದ ಇಂದಿನಿಂದ ಸುಪ್ರೀಂ ಕೋರ್ಟ್‌ನ ಬಾರ್ ಅಸೋಸಿಯೇಶನ್ ಹಾಗೂ ಐಸಿಎಆರ್, ಐಐಟಿ ದಿಲ್ಲಿ, ದಿಲ್ಲಿ ವಿಶ್ವವಿದ್ಯಾನಿಲಯ, ಜೆಎನ್‌ಯುನಂತಹ ಅತ್ಯುಚ್ಛ ಶೈಕ್ಷಣಿಕ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯಲು ಸಾಧ್ಯವಾಗಲಾರದು.
ನಿರಂತರ ಐದು ವರ್ಷಗಳ ಕಾಲ ವಾರ್ಷಿಕ ರಿಟರ್ನ್ಸ್ ಅನ್ನು ದಾಖಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010 ಅಡಿಯಲ್ಲಿ ಈ ಸಂಸ್ಥೆಗಳ ನೋಂದಣಿ ರದ್ದುಗೊಳಿಸಿದೆ.
ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಮಾಡದ ಹೊರತು ಯಾವ ವಿದೇಶಿ ದೇಣಿಗೆಯನ್ನೂ ಪಡೆಯಲು ಅವಕಾಶವಿಲ್ಲ.
ಕಾನೂನಿನಂತೆ ಈ ಸಂಸ್ಥೆಗಳು ತಮ್ಮ ವಾರ್ಷಿಕ ಆದಾಯ ಮತ್ತು ವೆಚ್ಚದ ಸ್ಟೇಟ್‌ಮೆಂಟ್ ಅನ್ನು ಸರಕಾರಕ್ಕೆ ಸಲ್ಲಿಸುವುದು ಕಡ್ಡಾಯ. ಇಲ್ಲದೇ ಇದ್ದರೆ ನೋಂದಣಿ ರದ್ದಾಗಲಿದೆ.