ಬಿಹಾರ: ಬಿಜೆಪಿಯ ಎಸ್‌ಸಿ ಘಟಕದ ಮುಖ್ಯಸ್ಥನ ಮೃತದೇಹ ಕಾಲುವೆಯಲ್ಲಿ ಪತ್ತೆ
Update: 2017-09-14 22:48 IST
ಶ್ರೀನಗರ, ಸೆ. 13: ಬಿಹಾರದ ನೌವಾಡಾದಲ್ಲಿರುವ ಜೌಬ್ ಜಲಸಂಗ್ರಹಾಗಾರದ ಸಮೀಪವಿರುವ ಕಾಲುವೆಯಲ್ಲಿ ಬಿಜೆಪಿಯ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷನ ಮೃತದೇಹ ಗುರುವಾರ ಪತ್ತೆಯಾಗಿದೆ.
ಮೃತಪಟ್ಟ ವ್ಯಕ್ತಿ ಬಿಜೆಪಿಯ ಎಸ್‌ಸಿ ಘಟಕದ ಮುಖ್ಯಸ್ಥ ಸುರೇಂದ್ರ ರಾಜವಂಶಿ (45) ಎಂದು ಗುರುತಿಸಲಾಗಿದೆ ಎಂದು ಸಿರ್ದಾಲಾ ಪೊಲೀಸ್ ಠಾಣೆಯ ಅಧಿಕಾರಿ ರಾಜ್ ಕುಮಾರ್ ತಿಳಿಸಿದ್ದಾರೆ.
ಗ್ರಾಮಸ್ಥರು ಮೃತದೇಹವನ್ನು ಗುರುತಿಸಿ ಕಾಲುವೆಯಿಂದ ಮೇಲೆ ತೆಗೆದರು. ರಾಜವಂಶಿ ಅವರನ್ನು ಹತ್ಯೆಗೈದು ಕಾಲುವೆಗೆ ಎಸೆಯಲಾಗಿದೆ ಎಂದು ಅವರ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.