ರೋಹಿಂಗ್ಯ ದಮನ ನಿಲ್ಲಿಸಿ: ಸೂ ಕಿಗೆ ಕೆನಡ ಪ್ರಧಾನಿ ಒತ್ತಾಯ
Update: 2017-09-14 23:02 IST
ಮಾಂಟ್ರಿಯಲ್ (ಕೆನಡ), ಸೆ. 14: ರಖೈನ್ ರಾಜ್ಯದಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ನಡೆಸಲಾಗುತ್ತಿರುವ ಸೇನಾ ದಮನ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಬುಧವಾರ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಒತ್ತಾಯಿಸಿದ್ದಾರೆ.
ಸೂ ಕಿ ಜೊತೆಗೆ ಫೋನ್‌ನಲ್ಲಿ ಮಾತನಾಡಿದ ಟ್ರೂಡೊ, ‘‘ನಿಮ್ಮ ಪಾತ್ರ ದೇಶದ ನೈತಿಕ ಹಾಗೂ ರಾಜಕೀಯ ನಾಯಕಿಯದ್ದಾಗಿರಬೇಕು’’ ಎಂದು ಹೇಳಿದರು.
ರಖೈನ್ ರಾಜ್ಯದಲ್ಲಿ ನೆಲೆಸಿರುವ ಪರಿಸ್ಥಿತಿ ಬಗ್ಗೆ ಅವರು ಗಂಭೀರ ಕಳವಳ ವ್ಯಕ್ತಪಡಿಸಿದರು ಎಂದು ಅವರ ಕಚೇರಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.