‘ಹದಿಹರೆಯದ ಮಾನಸಿಕ ಸಮಸ್ಯೆಗಳ’ ಬಗ್ಗೆ ಕಾರ್ಯಾಗಾರ
ಮಂಗಳೂರು, ಸೆ.15: ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿಯ ಮಹಿಳಾ ವೇದಿಕೆಯ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ಹದಿ ಹರೆಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಶ್ವೇತಾ ಮಾತನಾಡಿ, ಶಾರೀರಿಕ ಕಸಿತಗೊಳ್ಳುವ ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಉಂಟಾಗುವ ಅನೇಕ ಬದಲಾವಣೆಗಳ ಅರಿವು, ಪ್ರಾಮುಖ್ಯತೆ ಹಾಗು ವ್ಯೆಶಿಷ್ಟತೆಯ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ತಮ್ಮ ಮಾನಸಿಕ ಸಮತೋಲನವನ್ನು ಕಾಪಾಡುವುದು ಅತ್ಯವಶ್ಯಕ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಶ್ಯೆಕ್ಷಣಿಕ ಸಲಹೆಗಾರ ಡಾ. ಶಿವರಾಮ ಪಿ. ಹಾಗೂ ಮಹಿಳಾ ವೇದಿಕೆಯ ಸಂಚಾಲಕಿ ಡಾ.ಶೈಲಾ ರಾಣಿ ಬಿ., ಸಹ ಸಂಚಾಲಕಿ ಡಾ.ಶರ್ಮಿಳಾ ರೈ ಹಾಗೂ ಪ್ರೊ.ಗೀತಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶಕೀಲಾ ಸ್ವಾಗತಿಸಿದರು. ದೀಪಿಕಾ ವಂದಿಸಿದರು.ಕಾಲೇಜಿನ ಆಪ್ತ ಸಲಹೆಗಾರರಾದ ರಾಣಿಮಂಗಳಾ ಹಾಗು ನಮ್ರತಾ ಕಾರ್ಯಕ್ರಮ ನಿರೂಪಿಸಿದರು.