ಕಟ್ಟಡದಿಂದ ಜಿಗಿದ ವಿದ್ಯಾರ್ಥಿ: ಬ್ಲೂ ವ್ಹೇಲ್ ಚಾಲೆಂಜ್‌ನ ಶಂಕೆ

Update: 2017-09-15 15:06 GMT

ಗುವಾಹಟಿ,ಸೆ.15: ದಕ್ಷಿಣ ಅಸ್ಸಾಮಿನ ಸಿಲ್ಚಾರ್‌ನಲ್ಲಿ 22ರ ಹರೆಯದ ಎರಡನೇ ವರ್ಷದ ಕಾಲೇಜು ವಿದ್ಯಾರ್ಥಿಯೋರ್ವ ಕಟ್ಟಡದ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದು ಆನ್‌ಲೈನ್‌ನಲ್ಲಿಯ ವಿನಾಶಕಾರಿ ಗೇಮ್ ಬ್ಲೂ ವ್ಹೇಲ್ ಚಾಲೆಂಜ್ ಪ್ರಕರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಎದೆ ಮತ್ತು ಕೈಗಳಿಗೆ ಗಾಯಗಳಾಗಿರುವ ವಿದ್ಯಾರ್ಥಿಯನ್ನು ಸಿಲ್ಚಾರ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರ ವಾಗಿದೆ ಎನ್ನಲಾಗಿದೆ.

ನಾವು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಆತನ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ವಿಶ್ವದಲ್ಲಿ ಈಗಾಗಲೇ 100ಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿರುವ ಬ್ಲೂ ವ್ಹೇಲ್ ಚಾಲೆಂಜ್‌ನ ಹಾವಳಿ ಭಾರತದಲ್ಲಿಯೂ ಹೆಚ್ಚುತ್ತಿದ್ದು, ಹದಿಹರೆಯದ ಕೆಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News