ವಿವಿಐಪಿ ಹೆಲಿಕಾಪ್ಟರ್ ಹಗರಣ: ಮಹಿಳಾ ನಿರ್ದೇಶಕಿಗೆ ಜಾಮೀನು ನಿರಾಕರಣೆ

Update: 2017-09-15 15:07 GMT

 ಹೊಸದಿಲ್ಲಿ, ಸೆ.15: 3,600 ಕೋಟಿ ರೂ. ಮೊತ್ತದ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಹಣ ಚಲುವೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ದುಬೈ ಮೂಲದ ಎರಡು ಸಂಸ್ಥೆಗಳ ನಿರ್ದೇಶಕಿಗೆ ಜಾಮೀನು ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ.

ದುಬೈ ಮೂಲದ ಸಂಸ್ಥೆಗಳಾಗಿರುವ ಮ್ಯಾಟ್ರಿಕ್ಸ್ ಹೋಲ್ಡಿಂಗ್ಸ್ ಹಾಗೂ ಯುಎಚ್‌ವೈ ಸಕ್ಸೇನಾ ಸಂಸ್ಥೆಗಳ ನಿರ್ದೇಶಕಿಯಾಗಿರುವ ಶಿವಾನಿ ಸಕ್ಸೇನಾರನ್ನು ಜಾರಿ ನಿರ್ದೇಶನಾಲಯ (ಇಡಿ) ಜುಲೈ 17ರಂದು ಬಂಧಿಸಿದ್ದು ಪ್ರಸ್ತುತ ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ. ಈಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜುಲೈ 29ರಂದು ವಿಚಾರಣಾ ನ್ಯಾಯಾಲಯ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಶಿವಾನಿ ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ನ್ಯಾಯಮೂರ್ತಿ ಎ.ಕೆ.ಪಾಠಕ್, ಕೆಳನ್ಯಾಯಾಲಯದ ಆದೇಶವನ್ನು ಪುರಸ್ಕರಿಸಿ, ಜಾಮೀನು ಅರ್ಜಿಯನ್ನು ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News