ಆಯುರ್ವೇದ ವಿದ್ಯಾರ್ಥಿಗಳಿಂದ ಗಿನ್ನೆಸ್ ದಾಖಲೆ

Update: 2017-09-15 15:15 GMT

  ಜೈಪುರ, ಸೆ.15: ಏಕಕಾಲದಲ್ಲಿ 733 ಆಯುರ್ವೇದ ವಿದ್ಯಾರ್ಥಿಗಳು ‘ನ್ಯಾಸಕರ್ಮ’ ಎಂಬ ಆಯುರ್ವೇದ ಚಿಕಿತ್ಸಾ ಕ್ರಮವನ್ನು ಸ್ವೀಕರಿಸಿ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ.

ಗಿಡಮೂಲಿಕೆಗಳ ತೈಲ, ರಸ ಅಥವಾ ಪುಡಿಯನ್ನು ನಾಸಿಕ(ಮೂಗಿನ)ದ ಮೂಲಕ ಸೇವಿಸುವ ಆಯುರ್ವೇದ ಚಿಕಿತ್ಸಾ ಪದ್ದತಿಗೆ ‘ನ್ಯಾಸಕರ್ಮ’ ಎಂಬ ಹೆಸರಿದೆ.

  ಕಿವಿ, ಮೂಗು ಹಾಗೂ ಗಂಟಲಿನ ಸಮಸ್ಯೆಗೆ ಈ ಚಿಕಿತ್ಸಾ ಕ್ರಮವು ಸೂಕ್ತ ಪರಿಹಾರವಾಗಿದೆ. ಆಯುರ್ವೇದಲ್ಲಿ ಹೇಳಲಾಗಿರುವ ‘ಪಂಚಕರ್ಮ’ ಚಿಕಿತ್ಸಾ ವಿಧಾನದಲ್ಲಿ ನ್ಯಾಸಕರ್ಮ ಕೂಡಾ ಸೇರಿದೆ.

   ಜೈಪುರದಲ್ಲಿರುವ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯಲ್ಲಿ ನಡೆಯುತ್ತಿರುವ ಮೂರು ದಿನದ ಯುವ ಮೇಳದ ದ್ವಿತೀಯ ದಿನವಾದ ಶುಕ್ರವಾರ ದೇಶದಾದ್ಯಂತದ ವಿವಿಧ ಆಯುರ್ವೇದಿಕ್ ಸಂಸ್ಥೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು , ಅತೀ ಹೆಚ್ಚು ಮಂದಿ ಏಕಕಾಲಕ್ಕೆ ನ್ಯಾಸಕರ್ಮ ಚಿಕಿತ್ಸೆ ಪಡೆದ ದಾಖಲೆ ಬರೆದರು.

 ಆಯುರ್ವೇದ ವಿದ್ಯಾರ್ಥಿಗಳಿಗೆ ವಿಶ್ವದಾಖಲೆ ಪ್ರಮಾಣಪತ್ರವನ್ನು ಗಿನ್ನೆಸ್ ವಿಶ್ವದಾಖಲೆ ಪುಸ್ತಕದ ಅಧಿಕೃತ ತೀರ್ಪುಗಾರ ಸ್ವಪ್ನಿಲ್ ಡಂಗರಿಕರ್ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News