ಮಾತೃಪೂರ್ಣ ಯೋಜನೆಯ ಬಗ್ಗೆ ಮಾಹಿತಿ ಶಿಬಿರ

Update: 2017-09-15 15:23 GMT

ಬಂಟ್ವಾಳ, ಸೆ.15: ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲವಿಕಾಶ ಸಮಿತಿ, ಅನ್ನ ಪೂರ್ಣ ಸ್ತ್ರಿ ಶಕ್ತಿ ಗೊಂಚಲು ಶಂಭೂರು ಮತ್ತು ಅಂಗನಡಿಕೇಂದ್ರ ಶಂಭೂರು ಇವರ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಮತ್ತು ಮಾತೃಪೂರ್ಣ ಯೋಜನೆಯ ಬಗ್ಗೆ ಮಾಹಿತಿ ಶಿಬಿರ ಶಂಭೂರು ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ಶಿಕ್ಷಿತರಾದಾಗ ಶೊಷಣೆಮುಕ್ತ ಜೀವನ ನಡೆಸಲು ಸಹಾಕಾರಿಯಾಗುತ್ತದೆ. ಈ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಸ್ವಂತ ನಿಧಿಯಿಂದ ಅನುದಾನ ಮೀಸಲಿಟ್ಟಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದಿ ಸಮಿತಿ ಅಧ್ಯಕ್ಷ ಆನಂದ ಸಾಲ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಬಾಲವಿಕಾಶ ಸಮಿತಿಯ ಅಧ್ಯಕ್ಷ ಉದಯಕುಮಾರ್, ಗ್ರಾಪಂ ಸದಸ್ಯರಾದ ದಿವಾಕರ ಎಸ್, ವಿಶಾಲಾಕ್ಷೀ, ಸಂಪನ್ಮೂಲ ವ್ಯಕ್ತಿಗಳಾದ ಬಾಳ್ತಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ಬಿ.ಕೆ, ಸಾಂತ್ವಾನ ಕೇಂದ್ರದ ಸಮಾಜ ಕಾರ್ಯಕರ್ತ ಪ್ರಶಾಂತ್, ಆರೋಗ್ಯ ಮಿತ್ರ ಉಷಾ, ಶಾಂತ ಸಂದೇಶ ಟ್ರಸ್ಟ್ ಮಂಗಳೂರು ಇದರ ಕಾರ್ಯಕರ್ತೆ ಶ್ವೇತಾ, ಮೇಲ್ವಿಚಾರಕಿ ಶಾಲಿನಿ, ಮಹಿಳಾ ಮಂಡಲದ ಅಧ್ಯಕ್ಷೆ ಭವಾನಿ ಗೌರವಾಧ್ಯಕ್ಷೆ ಗೀತಾ, ಗೊಂಚಲು ಅಧ್ಯಕ್ಷೆ ಭಾರತಿ, ಹಿರಿಯ ಆರೋಗ್ಯ ಕಾರ್ಯಕರ್ತೆ ಮರಿಯ ಮತ್ತು ಆರೋಗ್ಯ ಕಾರ್ಯಕರ್ತೆ ಸುಮನ ಕ್ರಾಸ್ತಾ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಪ್ರೇಮ ಸ್ವಾಗತಿಸಿ ಸವಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News