ಇನ್ನು ವಾಹನ ಚಾಲನಾ ಪರವಾನಿಗೆಗೂ ಆಧಾರ್ ಜೋಡಣೆ ಕಡ್ಡಾಯ
Update: 2017-09-15 21:35 IST
ಗುರುಗ್ರಾಮ,ಸೆ.15: ಕೇಂದ್ರ ಸರಕಾರವು ಶೀಘ್ರವೇ ವಾಹನ ಚಾಲನಾ ಪರವಾನಿಗೆ ಮತ್ತು ಆಧಾರ್ ಜೋಡಣೆಯನ್ನು ಆರಂಭಿಸಲಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಹರ್ಯಾಣ ಡಿಜಿಟಲ್ ಶೃಂಗ 2017ನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬರೇ ಹಲವಾರು ಚಾಲನಾ ಪರವಾನಿಗೆಗಳನ್ನು ಪಡೆಯುವ ಪಿಡುಗನ್ನು ನಿವಾರಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂಬಂಧ ತಾನೀಗಾಗಲೇ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದು, ಚಾಲನಾ ಪರವಾನಿಗೆಗಳನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸುವ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಪ್ರಸಾದ್ ತಿಳಿಸಿದರು.