ಅಪ್ರಾಪ್ತೆಯ ಅತ್ಯಾಚಾರ: ಇಬ್ಬರ ಬಂಧನ

Update: 2017-09-15 16:24 GMT

ಮಂಗಳೂರು, ಸೆ. 15: ಬೆಳ್ಮ ಗ್ರಾಮದ ರೆಂಜಾಡಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಲು ಕಾರಣರಾದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಳ್ಮ ಗ್ರಾಮದವರಾದ ತಿಮ್ಮಪ್ಪ (48) ಹಾಗೂ ದಯಾನಂದ್ (23) ಎಂದು ಗುರುತಿಸಲಾಗಿದೆ.

ತಿಮ್ಮಪ್ಪ ಮತ್ತು ಬಾಲಕಿಯ ಸಂಬಂಧಿ ದಯಾನಂದ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ. ವಿಷಯ ಬಯಲಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಪೆಕ್ಟರ್ (ಪ್ರಭಾರ) ಕೆ. ಮುಹಮ್ಮದ್ ಶರೀಫ್, ಎಎಸ್‌ಐ ಸಂಜೀವ, ಸಿಬ್ಬಂದಿಗಳಾದ ಸುಖಲತಾ, ಶಿವಪ್ರಸಾದ್, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News