×
Ad

ಕೋಟ್ಪಾ ಕಾಯಿದೆಯಡಿ ಬಾರ್‌ಗಳಲ್ಲಿ ಪರಿಶೀಲನೆ

Update: 2017-09-15 23:00 IST

ಮಣಿಪಾಲ, ಸೆ.15: ಮಣಿಪಾಲದ ಬಾರ್ ಮತ್ತು ಹೊಟೇಲ್ ಹಾಗೂ ಗೇಮ್ ಸೆಂಟರ್‌ಗಳಲ್ಲಿ ಕೋಟ್ಪಾ ಕಾಯಿದೆಯ ಪಾಲನೆ ಕುರಿತು ಮಣಿಪಾಲ ಪೊಲೀಸರು ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಡಾ. ಸಂಜೀವ ಪಾಟೀಲ್ ಸೂಚನೆಯಂತೆ ಮಣಿಪಾಲ ಪೊಲೀಸರು ಈ ಕಾರ್ಯಾ ಚರಣೆ ನಡೆಸಿದ್ದಾರೆ. ಬಾರ್, ಹೊಟೇಲ್ ಹಾಗೂ ಗೇಮ್ ಸೆಂಟರ್‌ಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ರೆನ್ ಸ್ಥಾಪಿಸುವಂತೆ ಪೊಲೀಸರು ಮಾಲಕರುಗಳಿಗೆ ಸೂಚನೆ ನೀಡಿದ್ದಾರೆ. 

ಪ್ರತ್ಯೇಕ ಸ್ಮೋಕಿಂಗ್ ರೆನ್ ಹಾಗೂ ಪರವಾನಿಗೆ ನವೀಕರಣಗೊಳಿಸದ ಒಂದು ಸ್ನೂಕರ್ ಸೆಂಟರ್‌ನ್ನು ಮುಚ್ಚುಗಡೆ ಮಾಡಲಾಗಿದೆ. ಈ ಕಾರ್ಯಾ ಚರಣೆ ಮುಂದೆ ಜಿಲ್ಲೆಯ ಎಲ್ಲ ಬಾರ್ ಮತ್ತು ಹೊಟೇಲ್‌ಗಳಲ್ಲಿಯೂ ನಡೆಸ ಲಾಗುವುದು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News