ತ್ರಿವಳಿ ತಲಾಖ್: ಸರಕಾರ ಮುಸ್ಲಿಮರಿಂದ ಅಭಿಪ್ರಾಯ ಸಂಗ್ರಹಿಸಲಿ; ಅಝೀಝ್ ದಾರಿಮಿ
ಮಂಗಳೂರು, ಸೆ. 15: ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುತ್ತೇವೆ. ಆದರೆ ತೀರ್ಪಿನಲ್ಲಿ ತಿಳಿಸಿದಂತೆ ಕೇಂದ್ರ ಸರಕಾರ ಕಾನೂನು ರೂಪಿಸುವಾಗ ಮುಸ್ಲಿಂ ಪಂಡಿತರ ಅಭಿಪ್ರಾಯ ಪಡೆಯಬೇಕು ಎಂದು ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಆಗ್ರಹಿಸಿದರು.
ಎಸ್ಕೆಎಸೆಸೆಫ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಆಯೋಜಿಸಲಾದ ಧಾರ್ಮಿಕ ಸ್ವಾತಂತ್ರ ಸಂರಕ್ಷಣಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಸ್ವಾತಂತ್ರ ಪ್ರತಿಯೋರ್ವ ಪ್ರಜೆಯ ಸಂವಿಧಾನದತ್ತ ಹಕ್ಕಾಗಿದ್ದು, ಅದರಲ್ಲಿ ಹಸ್ತಕ್ಷೇಪ ನಡೆಸುವುದು ಸಂವಿಧಾನ ವಿರೋಧಿ ನಿಲುವಾಗಿದೆ. ಬಹು ಸಂಸ್ಕ್ರತಿಯನ್ನು ಸ್ವೀಕರಿಸಿದ ಪರಂಪರೆ ಇರುವ ದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನಿರಾಕರಿಸುವುದು ದೇಶದ ಜಾಗತಿಕ ಗೌರವಕ್ಕೆ ಧಕ್ಕೆ ತರುತ್ತಿದ್ದು ಮಾನವೀಯ ನೆಲೆಯಲ್ಲಿ ಅವರಿಗೆ ಆಶ್ರಯ ನೀಡಬೇಕೆಂದು ಆಗ್ರಹಿಸಿದರು.
ಸ್ವದಖತುಲ್ಲಾ ಫೈಝಿ, ಹುಸೈನ್ ದಾರಿಮಿ, ಮಾಜಿ ಮೇಯರ್ ಕೆ.ಅಶ್ರಫ್, ಕೆ.ಎಸ್.ಹೈದರ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್ಕೆಎಸೆಸೆಫ್ ದ.ಕ. ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ವಹಿಸಿದ್ದರು. ಅಬ್ದುಲ್ಲತೀಫ್ ದಾರಿಮಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ತಾಜುದ್ದೀನ್ ರಹ್ಮಾನಿ, ಇಕ್ಬಾಲ್ ಮುಲ್ಕಿ, ಇಬ್ರಾಹೀಂ ದಾರಿಮಿ ಮುಲ್ಕಿ, ಅಬ್ದುಲ್ ಜಲೀಲ್ ಬದ್ರಿಯಾ, ಉಸ್ಮಾನ್ ಅಬ್ದುಲ್ಲಾಹ್ ಸೂರಿಂಜೆ, ಇಬ್ರಾಹೀಂ ಕೊಣಾಜೆ, ಇರ್ಷಾದ್ ದಾರಿಮಿ ಬಂಟ್ವಾಳ, ಅಶ್ರಫ್ ಉಪ್ಪಿನಂಗಡಿ, ಶಾಫಿ ದಾರಿಮಿ ಸುಳ, ಶರೀಫ್ ಮೂಸಾ ಕುದ್ದುಪದವು, ಎಂ.ಪಿ.ಮೊದಿನಬ್ಬ ಪಲಿಮಾರು, ಹನೀಫ್ ಧೂಮಲಿಕೆ, ಮುಹಮ್ಮದ್ ಕುಂಞಿ ಮಾಸ್ಚರ್ ಕೈಕಂಬ, ಮುಸ್ತಫಾ ಫೈಝಿ ಕಿನ್ಯ, ಅಶ್ರಫ್ ಕಡಬ, ಝಕರಿಯ್ಯಿ ವೌಲವಿ ಮರ್ದಾಳ, ಯಾಸಿರ್ ಅರಫಾತ್ ಕೌಸರಿ, ಹಸನ್ ಅರ್ಶದಿ ಮೊದಲಾದವರು ಭಾಗವಹಿಸಿದ್ದರು.
ಅಬ್ದುರ್ರಶೀದ್ ರಹ್ಮಾನಿ ಸ್ವಾಗತಿಸಿದರು. ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ವಂದಿಸಿದರು.