×
Ad

ಸೆ. 24: ಫೋರಂ ಮಾಲ್‌ನಿಂದ ಅಲ್‌ಝೈಮರ್ ಕಾಯಿಲೆಯ ವಿರುದ್ಧ ಜಾಗೃತಿ ಓಟ

Update: 2017-09-15 23:16 IST

ಮಂಗಳೂರು, ಸೆ.15: ಅಲ್‌ಝೈಮರ್ ಕಾಯಿಲೆಯ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫೋರಂ ಮಾಲ್ ವತಿಯಿಂದ ಬೆಂಗಳೂರಿನ ನಿಮ್ಹಾನ್ಸ್ ಸಹಯೋಗದೊಂದಿಗೆ ದಕ್ಷಿಣ ಭಾರತದ ಚೆನ್ನೈ, ಹೈದರಾಬಾದ್, ಬೆಂಗಳೂರಿನ ಕೋರ ಮಂಗಲ, ವೈಟ್ ಫೀಲ್ಡ್ ಹಾಗೂ ಮಂಗಳೂರಿನ ಫೋರಂ ಫಿಜಾ ಮಾಲ್ ಸೇರಿದಂತೆ ದಿ ಪರ್ಪಲ್ ರನ್ ಜಾಗೃತಿ ಓಟದ ಕಾರ್ಯಕ್ರಮ ಏಕಕಾಲದಲ್ಲಿ ಸೆ. 24ರಂದು ಮುಂಜಾನೆ ನಡೆಯಲಿದೆ ಎಂದು ಪ್ರೆಸ್ಟೀಜ್ ಸಮೂಹ ಸಂಸ್ಥೆಯ ಮಂಗಳೂರಿನ ಪೋರಂ ಫಿಜಾ ಮಾಲ್ ಕೇಂದ್ರದ ಮುಖ್ಯಸ್ಥ ಫಯಾಝ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಓಟದಲ್ಲಿ 3,5,10,21 ಕಿ.ಮೀ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ನೋಂದಾವಣೆ ಈಗಾಗಲೇ ಆರಂಭಗೊಂಡಿದೆ. 21 ಕಿ.ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ 35 ಸಾವಿರ ಹಾಗೂ 10ಸಾವಿರ ಕಿ.ಮೀ ಓಟದಲ್ಲಿ ಪ್ರತಮ ಸ್ಥಾನ ಪಡೆಯುವವರಿಗೆ 25 ಸಾವಿರ ಮತ್ತು 3ಕಿ.ಮೀ ,5.ಕಿ ಮೀ ಓಡುವವರಿಗೆ ಪೋತ್ಸಾಹಕ ಬಹುಮಾನ ನೀಡಲಾಗುವುದು. ಪೋರಂ ವೆಬ್ ಸೈಟ್ ಮೂಲಕ ರಿಜಿಸ್ಟ್ರೇಶನ್ ಮಾಡಬಹುದಾಗಿದೆ.

10 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಫಯಾಝ್ ತಿಳಿಸಿದ್ದಾರೆ. ಅಲ್‌ಝೈಮರ್ ಕಾಯಿಲೆಗೆ ಪ್ರತಿವರ್ಷ ಲಕ್ಷಾಂತರ ಜನರು ಸಾವಿಗೀಡಾಗುತ್ತಾರೆ. ಮಿದುಳಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ನೆನಪು ಶಕ್ತಿ ಅಳಿಸಿ ಹೋಗುವ ಈ ಕಾಯಿಲೆ ಅಲ್‌ಝೈಮರ್‌ನಿಂದ 55ವರ್ಷಗಳ ನಂತರದ ವ್ಯಕ್ತಿಗಳು ಸಾಕಷ್ಟು ಮಂದಿ ದೇಶದ್ಯಾಂತ ಬಳಲುತ್ತಿರುವುದುರಿಂದ ಈ ಕಾಯಿಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡ ಅಭಿಯಾನ ಮಹತ್ವದ್ದಾಗಿದೆ ಎಂದು ನಿಮ್ಹಾನ್ಸ್‌ನ ವೈದ್ಯರಾದ ಡಾ. ತಿರುಮೂರ್ತಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪೋರಂ ಫಿಝಾ ಮಾಲ್ ಕೇಂದ್ರದ ಅಧಿಕಾರಿ ಸುನಿಲ್ ಹಾಗೂ ಇತರ ಸಂಘಟಕರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News