×
Ad

ಜೈಲಿನಲ್ಲಿರುವ ಮಗನಿಗೆ ಗಾಂಜಾ ಸಾಗಾಟಕ್ಕೆ ಯತ್ನ: ಆರೋಪಿ ತಂದೆ ಸೆರೆ

Update: 2017-09-15 23:22 IST

ಮಂಗಳೂರು, ಸೆ. 15: ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಮಂಗಳೂರು ಜೈಲ್‌ನಲ್ಲಿರುವ ಮಗನಿಗೆ ಆತನ ತಂದೆಯೇ ಗಾಂಜಾ ಎಸೆಯುತ್ತಿದ್ದಾಗ ಬರ್ಕೆ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.

ದಿವಾಕರ್ ಬಂಧಿತ ಆರೋಪಿ. ಈತ ನ್ಯಾಯಾಂಗ ಬಂಧನದಲ್ಲಿರುವ ಮಗ ರಕ್ಷಿತ್ ಕೋಟ್ಯಾನ್‌ಗೆ ಗಾಂಜಾ ಹಾಗೂ ಪ್ಯಾರಸಿಟಮಲ್ ಮಾತ್ರೆಯನ್ನು ಡಯೆಟ್ ಕಾಲೇಜು ಆವರಣದಿಂದ ಎಸೆಯುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬರ್ಕೆ ಪಿಎಸ್‌ಐ ನರೇಂದ್ರ ಅವರಿಗೆ ಬಂದ ಖಚಿತ ಮಾಹಿತಿ ಆಧಾರದಲ್ಲಿ ಸಿಬ್ಬಂದಿಗಳ ಜತೆ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ದಿವಾಕರ್‌ನನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದಾಗ 60 ಗ್ರಾಂ ಗಾಂಜಾ ಹಾಗೂ 6 ಪ್ಯಾರಸಿಟಮಲ್ ಮಾತ್ರೆ ಮತ್ತು ಮೊಬೈಲ್ ಪತ್ತೆಯಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News