×
Ad

ಕೇರಳ 'ಲವ್ ಜಿಹಾದ್': ಎನ್‌ಐಎ ತನಿಖೆ ರದ್ದುಗೊಳಿಸುವಂತೆ ಕೋರಿ ಸುಪ್ರೀಂಗೆ ಮನವಿ

Update: 2017-09-16 21:29 IST

ಹೊಸದಿಲ್ಲಿ, ಸೆ. 16: ಕೇರಳದ ಲವ್ ಜಿಹಾದ್ ಆರೋಪ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನ ಆದೇಶದಂತೆ ಎನ್‌ಐಎ ನಡೆಸುತ್ತಿರುವ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಮಹಿಳೆಯ ಪತಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

 ಎನ್‌ಐಎಗೆ ತನಿಖೆ ನಡೆಸಲು ನೀಡಿದ ಆದೇಶ ಹಿಂದೆ ತೆಗೆದುಕೊಳ್ಳುವಂತೆ ಮನವಿ ಮಾಡಿರುವ ಶಫೀನ್ ಜಹಾನ್, ಎನ್‌ಐಎ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಅಖಿಲಾ ಆಗಿದ್ದ ಹಾದಿಯಾ ಅವರನ್ನು ಅವರ ಒಪ್ಪಿಗೆ ಇಲ್ಲದೆ ಹೆತ್ತವರ ನಿವಾಸದಲ್ಲಿ ಬಂಧನದಲ್ಲಿ ಇರಿಸಲು ಸಾಧ್ಯವಿಲ್ಲ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಕೂಡ ಮನವಿಯಲ್ಲಿ ಹೇಳಲಾಗಿದೆ.

ಜಹಾನ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ 22ರಂದು ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News