ರಾಜತಾಂತ್ರಿಕ ಪರಿಹಾರದ ಸಹನೆ ಕುಸಿಯುತ್ತಿದೆ: ಅಮೆರಿಕ

Update: 2017-09-16 17:06 GMT

ವಾಶಿಂಗ್ಟನ್, ಸೆ. 16: ಉತ್ತರ ಕೊರಿಯದೊಂದಿಗೆ ವ್ಯವಹರಿಸಲು ತಾನು ಸೇನಾ ಆಯ್ಕೆಗಳನ್ನು ಹೊಂದಿದ್ದೇನೆ ಎಂದು ಅಮೆರಿಕ ಹೇಳಿದೆ ಹಾಗೂ ಜಪಾನ್‌ನ ಮೇಲಿನಿಂದಾಗಿ ಅದು ಶುಕ್ರವಾರ ದೀರ್ಘ ವ್ಯಾಪ್ತಿಯ ಕ್ಷಿಪಣಿಯೊಂದನ್ನು ಹಾರಿಸಿದ ಬಳಿಕ ರಾಜತಾಂತ್ರಿಕತೆ ಮೇಲಿನ ತನ್ನ ಸಹನೆ ಕಡಿಮೆಯಾಗುತ್ತಿದೆ ಎಂಬ ಇಂಗಿತವನ್ನು ನೀಡಿದೆ.

ಅದೇ ವೇಳೆ, ಉತ್ತರ ಕೊರಿಯದ ‘ಅತ್ಯಂತ ಪ್ರಚೋದನಕಾರಿ’ ಕ್ಷಿಪಣಿ ಹಾರಾಟವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಂಡಿಸಿದೆ.

ಉತ್ತರ ಕೊರಿಯವು ಈಗಾಗಲೇ ಸೆಪ್ಟಂಬರ್ 3ರಂದು ಶಕ್ತಿಶಾಲಿ ಹೈಡ್ರೋಜನ್ ಬಾಂಬೊಂದನ್ನು ಸ್ಫೋಟಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಸ್ಫೋಟದ ಬಳಿಕ ಭದ್ರತಾ ಮಂಡಳಿಯ 15 ಸದಸ್ಯ ದೇಶಗಳು ಆ ದೇಶದ ವಿರುದ್ಧದ ದಿಗ್ಬಂಧನಗಳನ್ನು ಹೆಚ್ಚಿಸಿದೆ.

ಉತ್ತರ ಕೊರಿಯದ ಕ್ಷಿಪಣಿ ಮತ್ತು ಪರಮಾಣು ಕಾರ್ಯಕ್ರಮಗಳಿಗೆ ರಾಜತಾಂತ್ರಿಕ ಪರಿಹಾರಗಳನ್ನು ಕಂಡುಹಿಡಿಯುವ ಸಹನೆಯ ಕಟ್ಟೆಯೊಡೆಯುತ್ತಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್‌ಮಾಸ್ಟರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News