ಗ್ರಾಮ ಸಮೃದ್ದಿ, ಸ್ವಚ್ಛತಾ ಪಾಕ್ಷಿಕ ಆಚರಣೆ: ಶಿವಾನಂದ ಕಾಪಶಿ
ಉಡುಪಿ, ಸೆ.16: ಜಿಲ್ಲೆಯಲ್ಲಿ ಅ.1ರಿಂದ 15ರವರೆಗೆ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಸಮೃದ್ದಿ ಹಾಗೂ ಸ್ವಚ್ಛತಾ ಪಾಕ್ಷಿಕ ಆಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಶನಿವಾರ ಜಿಪಂ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕೇಂದ್ರ ಸರಕಾರದ ಸೂಚನೆಯಂತೆ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಅ.1ರಿಂದ 15ರವರೆಗೆ ವಿಶೇಷ ಗ್ರಾಮಸಭೆಗಳು, ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳು, ಕೃಷಿ, ತೋಟಗಾರಿಕೆ, ಶಿಕ್ಷಣ ಹಾಗೂ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆ ಗಳ ಕುರಿತು ಮಾಹಿತಿ ಹಾಗೂ ಸವಲತ್ತುಗಳ ವಿತರಣಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಗ್ರಾಮದ ಸಮಗ್ರ ಅಭಿವೃದ್ದಿ ಕುರಿತು ತೆಗದುಕೊಂಡಿರುವ ಹಾಗೂ ತೆಗೆದು ಕೊಳ್ಳಬಹುದಾದ ಕ್ರಮಗಳ ಕುರಿತು ಬೀದಿ ನಾಟಕಗಳನ್ನು ಏರ್ಪಡಿಸುವ ಕುರಿತಂತೆ ಎಲ್ಲಾ ಗ್ರಾಪಂಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ತಾಪಂ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಿಇಓ ಸೂಚಿಸಿದರು.
ಗ್ರಾಮದ ಸಮಗ್ರ ಅಭಿವೃದ್ದಿ ಕುರಿತು ತೆಗದುಕೊಂಡಿರುವ ಹಾಗೂ ತೆಗೆದು ಕೊಳ್ಳಬಹುದಾದ ಕ್ರಮಗಳ ಕುರಿತು ಬೀದಿ ನಾಟಕಗಳನ್ನು ಏರ್ಪಡಿಸುವ ಕುರಿತಂತೆ ಎಲ್ಲಾ ಗ್ರಾಪಂಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸೆಯಲ್ಲಿಹಾಜರಿದ್ದಎಲ್ಲಾತಾಪಂಕಾರ್ಯನಿರ್ವಹಣಾಅಧಿಕಾರಿಗಳಿಗೆಹಾಗೂವಿವಿ ಇಲಾಖೆಯ ಅಧಿಕಾರಿಗಳಿಗೆ ಸಿಇಓ ಸೂಚಿಸಿದರು. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ, ಶೌಚಾಲಯಗಳಬಳಕೆ ಪರಿಶೀಲನೆ, ಉದ್ಯೋಗ ಖಾತ್ರಿ ಯೋಜನೆ , ವಸತಿ ಯೋಜನೆಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹಾಗೂ ಗ್ರಾಮದ ಎಲ್ಲಾ ಸ್ವಸಹಾಯ ಸಂಘಗಳು, ಯುವಕ ಯುವತಿ ಮಂಡಲಗಳು ಹಾಗೂ ಶಾಲೆಗಳ ನೆರವಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಿಇಓ ತಿಳಿಸಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ, ಶೌಚಾಲಯಗಳಬಳಕೆ ಪರಿಶೀಲನೆ, ಉದ್ಯೋಗ ಖಾತ್ರಿ ಯೋಜನೆ , ವಸತಿ ಯೋಜನೆಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹಾಗೂ ಗ್ರಾಮದ ಎಲ್ಲಾ ಸ್ವಸಹಾಯ ಸಂಘಗಳು, ಯುವಕ ಯುವತಿ ಮಂಡಲಗಳು ಹಾಗೂ ಶಾಲೆಗಳ ನೆರವಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಿಇಓ ತಿಳಿಸಿದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್‌ಹಾಗೂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.