×
Ad

ಉಡುಪಿ ಜಿಲ್ಲೆಯ 17 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ

Update: 2017-09-16 22:37 IST

ಉಡುಪಿ, ಸೆ.16: ರೈತರು ಅವರ ಜಮೀನಿನಲ್ಲಿ ಬೆಳೆದ ಬೆಳೆಯ ವಿವರ ಜಮೀನಿನ ಉಪಯೋಗವನ್ನು ಇಲ್ಲಿಯವರಗೆ ಗ್ರಾಮದ ಪಹಣಿ ಪತ್ರಿಕೆಯಲ್ಲಿ ದಾಖಲಿಸಲಾಗುತ್ತಿದ್ದು, ಪ್ರಸ್ತುತ ಸರ್ವೇ ನಂಬ್ರವಾರು ಕ್ಷೇತ್ರ ಸಮೀಕ್ಷೆ ನಡೆಸಿ ನಿಗದಿತ ತಂತ್ರಾಂಶದಲ್ಲಿ ಆನ್‌ಲೈನ್ ದಾಖಲಿಸುವ ಮೂಲಕ ರೈತರಿಗೆ ಸರಕಾರದಿಂದ ದೊರೆಯತಕ್ಕ ಸೌಲ್ಯಗಳು ಶೀಘ್ರವಾಗಿ ದೊರಕುವಂತೆ ಮಾಡುವ ದೃಷ್ಟಿಯಿಂದ ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ರಟ್ಟಾಡಿ, ಕುಂದಬಾರಂದಾಡಿ, ಕೋಣಿ, ಹಡವು, ಬಡಾಕೆರೆ, ಬೇಳೂರು ಗ್ರಾಮಗಳು, ಉಡುಪಿ ತಾಲೂಕಿನ ಹಾರಾಡಿ, ಶೀರೂರು, 82 ಕುದಿ, ಪೆಜಮಂಗೂರು, ಹೊಸಾಳ, ಮೂಡಬೆಟ್ಟು ಗ್ರಾಮಗಳು ಹಾಗೂ ಕಾರ್ಕಳ ತಾಲೂಕಿನ ಜಾರ್ಕಳ, ರೆಂಜಾಳ, ಬೋಳ, ಕಡ್ತಲ, ಇನ್ನಾ ಹೀಗೆ 17 ಗ್ರಾಮಗಳಲ್ಲಿ ರೈತರು ಸರ್ವೆ ನಂಬ್ರವಾರು/ ಫ್ಲಾಟುವಾರು ಬೆಳೆಯ ವಿವರ ಹಾಗೂ ರೈತರ ಆಧಾರ್ ಸಂಖ್ಯೆಯನ್ನು ದಾಖಲೀಕರಣ ಮಾಡುವ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದೆ.

ಈ ಉದ್ದೇಶಕ್ಕಾಗಿ ನೇಮಕಗೊಂಡ ಮೂಲ ಕಾರ್ಯಕರ್ತರು ಮೇಲಿನ ಗ್ರಾಮಗಳ ರೈತರು, ಭೂಹಿಡುವಳಿದಾರರನ್ನು ಸರ್ವೆ ನಂಬ್ರವಾರು ಬೆಳೆ ಸಮೀಕ್ಷೆಯನ್ನು ಇಂದಿನಿಂದಲೇ ಕೈಗೊಳ್ಳಲಿದ್ದು ಎಲ್ಲಾ ಭೂಮಾಲಕರು ಅವರ ಆಧಾರ್ ದಾಖಲೆಯನ್ನು ಭೂದಾಖಲೆಗಳಲ್ಲಿ ನಮೂದಿಸುವ ಬಗ್ಗೆ ನೀಡಿ ಅವರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಡಲು ತಮ್ಮ ಸಂಪೂರ್ಣ ಜಮೀನನ್ನು ತೋರಿಸಲು ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News