ರಿಯಲಿಟಿ ತಾರೆಯ ಎದುರು ಸ್ಪರ್ಧಿಸಲು ಸಿದ್ಧವಾಗಿರಲಿಲ್ಲ: ಹಿಲರಿ

Update: 2017-09-16 17:12 GMT

ವಾಶಿಂಗ್ಟನ್, ಸೆ. 16: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಯಲಿಟಿ ಟೆಲಿವಿಶನ್ ತಾರೆಯ ವಿರುದ್ಧ ಸ್ಪರ್ಧಿಸಲು ತಾನು ಸಿದ್ಧವಾಗಿರಲಿಲ್ಲ ಅಥವಾ ಅದಕ್ಕೆ ಬೇಕಾದ ಅಸ್ತ್ರಗಳು ತನ್ನಲ್ಲಿರಲಿಲ್ಲ ಎಂದು 2016 ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಮಾಜಿ ವಿದೇಶಾಂಗ ಕಾರ್ಯದರ್ಶಿಯೂ ಆಗಿದ್ದ ಹಿಲರಿ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಆಘಾತಕಾರಿ ಸೋಲನುಭವಿಸಿರುವುದನ್ನು ಸ್ಮರಿಸಬಹುದಾಗಿದೆ.

ಅಭಿವೃದ್ಧಿಯ ಕಾರ್ಯಸೂಚಿಯನ್ನು ತಾನು ಹೊಂದಿದ್ದೆ, ಆದರೆ ಬಹುಶಃ ಅದನ್ನು ಸ್ವೀಕರಿಸುವವರು ಇರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

 ‘‘ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಮತ್ತು ಅಧ್ಯಕ್ಷರಾಗುವುದನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ರಿಯಲಿಟಿ ಟಿವಿ ಅಭ್ಯರ್ಥಿಯೊಬ್ಬರ ವಿರುದ್ಧ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ನಾನು ನಿಜವಾಗಿಯೂ ಸಿದ್ಧವಾಗಿರಲಿಲ್ಲ ಅಥವಾ ಅದಕ್ಕೆ ಬೇಕಾದ ಅಸ್ತ್ರಗಳು ನನ್ನಲ್ಲಿರಲಿಲ್ಲ’’ ಎಂದು ಹಿಲರಿ ‘ಪಿಬಿಎಸ್ ನ್ಯೂಸ್ ಅವರ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

 ಇದು ಬಹುಶಃ ಜಗತ್ತಿನ ಅತ್ಯಂತ ಕಠಿಣ ಕೆಲಸವಾಗಿರಬಹುದು ಎಂದು 69 ವರ್ಷದ ಡೆಮಾಕ್ರಟಿಕ್ ನಾಯಕಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News