ಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯ
Update: 2017-09-16 23:30 IST
ಬಂಟ್ವಾಳ, ಸೆ. 16: ತಾಲೂಕಿನ ಬಿ.ಸಿ.ರೋಡ್ ಕಡೆಯಿಂದ ಮೆಲ್ಕಾರ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸಿನಿಂದ 60ರ ಹರೆಯದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಪಾಣೆಮಂಗಳೂರಿನ ಡೆಂಜಪಾಡಿ ನಿವಾಸಿ ಖತೀಜಮ್ಮ ಬಸ್ ನಿಂದ ಬಿದ್ದವರು ಎಂದು ಗುರುತಿಸಲಾಗಿದೆ. ಇವರು ಪಾಣೆಮಂಗಳೂರಿನಲ್ಲಿ ಬಸ್ಸಿನಿಂದ ಇಳಿಯುವ ಮುಂಚೆಯೇ ಚಾಲಕ ಬಸ್ ಚಲಾಯಿಸಿರುವುದು ಇದಕ್ಕೆ ಕಾರಣ ಎಂದು ಅವರು ಸಂಚಾರಿ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.