×
Ad

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಆಳ್ವಾಸ್ ಪ್ರೌಢಶಾಲೆಗೆ ಪ್ರಶಸ್ತಿ

Update: 2017-09-16 23:38 IST

ಮೂಡುಬಿದಿರೆ, ಸೆ.16: ಗುರುದೇವ ಪ್ರೌಢಶಾಲೆ, ಒಡಿಯೂರು, ಬಂಟ್ವಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಮೂಡುಬಿದಿರೆ ವಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕರ ತಂಡ ಹಾಗೂ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ನೀಡಲ್ಪಡುವ ಜಿಲ್ಲೆಯ ಪ್ರತಿಷ್ಠಿತ ಯೋಗಕುಮಾರಿ ಪ್ರಶಸ್ತಿಯನ್ನು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿರ್ಮಲ ತಮ್ಮದಾಗಿಸಿಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ನೀಡಲ್ಪಡುವ ಜಿಲ್ಲೆಯ ಪ್ರತಿಷ್ಠಿತ ಯೋಗಕುಮಾರ ಪ್ರಶಸ್ತಿಯನ್ನು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪವನ್ ತಮ್ಮದಾಗಿಸಿಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ಉಪ್ಪಿನಂಗಡಿಯಲ್ಲಿ ನಡೆಯುವ ವಿಭಾಗಮಟ್ಟದ ಯೋಗಾಸನ ಸ್ಪರ್ಧೆಗೆ ಆಳ್ವಾಸ್ ಪ್ರೌಢಶಾಲೆಯಿಂದ 13 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ಬಾಲಕರ ವಿಭಾಗದಲ್ಲಿ ಮಲ್ಲಿಕಾರ್ಜುನ, ಬಸವರಾಜು, ಪವನ್, ಮಿಲನ್, ಅಮೋಘ್ ಹಾಗೂ ಬಾಲಕಿಯರ ವಿಭಾಗದಲ್ಲಿ ಮಾಯವ್ವ, ಅನನ್ಯ, ರೂಪ, ನಿರ್ಮಲ, ಪ್ರಿಯಾಂಕ, ಸವಿತಾ, ಪೂಜಾ, ಭಾರತಿ ಆಯ್ಕೆಯಾಗಿರುವ ಆಳ್ವಾಸ್‌ನ ಯೋಗಪಟುಗಳು. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News