ಪ್ರಧಾನಿಯ 67ನೆ ಹುಟ್ಟುಹಬ್ಬಕ್ಕೆ 68 ಪೈಸೆಯ ಚೆಕ್ ಗಳ ಉಡುಗೊರೆ ನೀಡಿದ ಎನ್ ಜಿಒ!

Update: 2017-09-17 12:25 GMT

ಹೊಸದಿಲ್ಲಿ, ಸೆ.17: ಪ್ರಧಾನಿ ನರೇಂದ್ರ ಮೋದಿಯವರ 67ನೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕರ್ನೂಲು ಮೂಲದ ರಾಯಲ್ ಸೀಮಾ ಸಗುನೀತಿ ಸಾಧನಾ ಸಮಿತಿ ಎಂಬ ಎನ್ ಜಿಒ ಒಂದು ಪ್ರಧಾನಿಯವರಿಗೆ 68 ಪೈಸೆಯ ಚೆಕ್ ಗಳನ್ನು ಉಡುಗೊರೆಯಾಗಿ ನೀಡಿದೆ!.

ಆಂಧ್ರಪ್ರದೇಶದ ರಾಯಲಸೀಮಾ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಗಮನಸೆಳೆಯಲು ಈ ಎನ್ ಜಿಒ ಪ್ರಧಾನಿಯವರಿಗೆ ಈ ಚೆಕ್ ಗಳನ್ನು ಕಳುಹಿಸಿದೆ.

ಇಲ್ಲಿನ ಬರ ಪರಿಸ್ಥಿತಿಯಿಂದ ರೈತರು ಕಂಗೆಟ್ಟಿದ್ದಾರೆ. ಆದ್ದರಿಂದ ಎನ್ ಜಿಒದ ಕೆಲ ರೈತ ಸದಸ್ಯರು ಚೆಕ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಬಿ. ದಶರಥ್ ರೆಡ್ಡಿ ಹೇಳಿದ್ದಾರೆ.

“ಈ ಪ್ರದೇಶದಲ್ಲಿ ಹಲವಾರು ನದಿಗಳು ಹರಿಯುತ್ತಿವೆ. ಆದರೆ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳ ಕೊರತೆಯಿಂದ ಇಲ್ಲಿನ ರೈತರು ಹಾಗೂ ಜನಸಾಮಾನ್ಯರು ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ನಾವು ನಮ್ಮ ಸಮಸ್ಯೆಯನ್ನು ಉನ್ನತ ಮಟ್ಟದಲ್ಲಿ ಸೆಳೆಯಲು ನಾವು ಚೆಕ್ ಗಳನ್ನು ಕಳುಹಿಸಿದ್ದೇವೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News