ಮೊದಲ ಏಕದಿನ: ಆಸ್ಟ್ರೇಲಿಯದ ಗೆಲುವಿಗೆ 282 ರನ್ ಸವಾಲು

Update: 2017-09-17 12:28 GMT

ಚೆನ್ನೈ, ಸೆ.17: ಆಸ್ಟ್ರೇಲಿಯ ವಿರುದ್ಧ ಮೋದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 281 ರನ್ ಗಳಿಸಿದೆ.

ಇಲ್ಲಿನ ಎಂ.ಎ.ಚಿದಂಬರಮ್ ಸ್ಟೇಡಿಯಂನಲ್ಲಿ ರವಿವಾರ ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆಸ್ಟ್ರೇಲಿಯದ ನಥಾನ್ ಕೌಲ್ಟರ್ ನೀಲ್, ಮಾರ್ಕೂಸ್ ಸ್ಟೋನಿಸ್, ಆ್ಯಡಮ್ ಝಂಪಾ ಮತ್ತು ಜೇಮ್ಸ್ ಫಾಕ್ನರ್ ದಾಳಿಗೆ ಸಿಲುಕಿ 21.3 ಓವರ್‌ಗಳಲ್ಲಿ 87ಕ್ಕೆ 5 ವಿಕೆಟ್ ಕಳೆದುಕೊಂಡಿದ್ದರೂ ಬಳಿಕ ಮಾಜಿ ನಾಯಕ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ಭುವನೇಶ್ವರ ಕುಮಾರ್ ಅವರ ಉಪಯುಕ್ತ ನೆರವಿನಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಅಜಿಂಕ್ಯ ರಹಾನೆ (5), ವಿರಾಟ್ ಕೊಹ್ಲಿ(0), ಮನೀಷ್ ಪಾಂಡೆ(0), ರೋಹಿತ್ ಶರ್ಮ(28), ಕೇದಾರ್ ಜಾಧವ್(40) ಔಟಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ತಂಡವನ್ನು ಆಧರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ 6ನೆ ವಿಕೆಟ್‌ಗೆ ಜೊತೆಯಾಗಿ 118 ರನ್ ಸೇರಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಪಾಂಡ್ಯ ಸ್ಫೋಟಕ 83 ರನ್(66ಎ, 5ಬೌ,5ಸಿ) ಗಳಿಸಿ ಔಟಾದರು. ಏಳನೆ ವಿಕೆಟ್‌ಗೆ ಧೋನಿ ಮತ್ತು ಭುವನೇಶ್ವರ ಕುಮಾರ್ ಜೊತೆಯಾಗಿ 72 ರನ್ ಜಮೆ ಮಾಡಿದರು. ಧೋನಿ 79ರನ್(88ಎ, 4ಬೌ,2ಸಿ) ಗಳಿಸಿ ಔಟಾದರು. ಭುವನೇಶ್ವರ ಕುಮಾರ್ 32 ರನ್ (30ಎ, 5ಬೌ) ಗಳಿಸಿ ಔಟಾಗದೆ ಉಳಿದರು. ಆಸ್ಟ್ರೇಲಿಯದ ನಥಾನ್ ಕೌಲ್ಟರ್ ನೀಲ್ 44ಕ್ಕೆ 3, ಮಾರ್ಕೂಸ್ ಸ್ಟೋನಿಸ್ 54ಕ್ಕೆ 2, ಆ್ಯಡಮ್ ಝಂಪಾ ಮತ್ತು ಜೇಮ್ಸ್ ಫಾಕ್ನರ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News