ಅಂತಾರಾಷ್ಟ್ರೀಯ ಕ್ರಿಕೆಟ್: ಅರ್ಧಶತಕದಲ್ಲಿ ಶತಕದ ದಾಖಲೆ ಬರೆದ ಧೋನಿ
ಚೆನ್ನೈ, ಸೆ.17: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರವಿವಾರ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಗಳಿಸಿದ ಹೊಸ ದಾಖಲೆ ಬರೆದಿದ್ದಾರೆ.
ಚೆನ್ನೈನ ಎಂ.ಎ. ಚಿದಂಬರಮ್ ಸ್ಟೇಡಿಯಂನಲ್ಲಿ ಧೋನಿ 75 ಎಸೆತಗಳಲ್ಲಿ 1 ಬೌಂಡರಿ ನೆರವಿನಲ್ಲಿ ಅರ್ಧಶತಕ ದಾಖಲಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಿಸಿದ ಅರ್ಧಶತಕಗಳ ಸಂಖ್ಯೆಯನ್ನು 100ಕ್ಕೆ ಏರಿಸಿದರು.
ಧೋನಿ 302ನೆ ಏಕದಿನ ಕ್ರಿಕೆಟ್‌ನಲ್ಲಿ 66ನೆ ಅರ್ಧಶತಕ ದಾಖಲಿಸಿದರು.. ಅವರು ಟೆಸ್ಟ್‌ನಲ್ಲಿ 33 ಮತ್ತು ಟ್ವೆಂಟಿ -20 ಕ್ರಿಕೆಟ್‌ನಲ್ಲಿ 1 ಅರ್ಧಶತಕ ಗಳಿಸಿದ್ದಾರೆ.
ಧೋನಿ 100ನೆ ಅಂತಾರಾಷ್ಟ್ರೀಯ ಅರ್ಧಶತಕ ದಾಖಲಿಸಿದ ಭಾರತದ ನಾಲ್ಕನೆ ದಾಂಡಿಗ. ಸಚಿನ್ ತೆಂಡುಲ್ಕರ್ (164), ರಾಹುಲ್ ದ್ರಾವಿಡ್ (146), ಸೌರವ್ ಗಂಗುಲಿ(107) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರಕ್ಕಿಂತ ಅಧಿಕ ಅರ್ಧಶತಕಗಳನ್ನು ದಾಖಲಿಸಿದ್ದಾರೆ.