×
Ad

“ನನ್ನ ತಾಯ್ನಾಡಿಗೆ ಹಿಂದಿರುಗಲು ಯಾವತ್ತೂ ಬಯಸುವುದಿಲ್ಲ, ಅಲ್ಲಿ ಸೈನಿಕರು ಮಕ್ಕಳನ್ನೂ ಕೊಲ್ಲುತ್ತಾರೆ”

Update: 2017-09-17 19:26 IST

ಹೊಸದಿಲ್ಲಿ, ಸೆ.17: ಅದು ನೂರುಲ್ ಇಸ್ಲಾಮ್ ಎಂಬ ಬಾಲಕನ ಬದುಕಿನ ಚಿತ್ರಣವನ್ನೇ ಬದಲಾಯಿಸಿದ 2012ರ ತಡರಾತ್ರಿ. ಆಗ ನೂರುಲ್ ಗೆ ಕೇವಲ 7 ವರ್ಷ ವಯಸ್ಸಾಗಿತ್ತು. ಮ್ಯಾನ್ಮಾರ್ ನ ಸೈನಿಕರು ಏಕಾಏಕಿ ಆತನ ಮನೆಯ ಮೇಲೆ ದಾಳಿ ನಡೆಸಿದರು.

“ನನ್ನ ತಂದೆಯ ಬಳಿಯ ಹಣ ಇಲ್ಲದೆ ಇದ್ದುದರಿಂದ ನಮಗೆ ಸಹಾಯ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ನಮ್ಮ ಪರಿಸ್ಥಿತಿ ತೀರಾ ಕೆಟ್ಟದ್ದಾಗಿತ್ತು. ನಾವು ಭಾರತಕ್ಕೆ ತಲುಪುವವರೆಗೂ ಹಸಿವೆಯಿಂದ ಕಂಗೆಟ್ಟಿದ್ದೆವು” ಎಂದು ಆ ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾನೆ 12 ವರ್ಷದ ಬಾಲಕ ನೂರುಲ್.

“ನಾನು ಭಾರತದಲ್ಲಿ ಸಂತೋಷವಾಗಿದ್ದೇನೆ. ಇಲ್ಲಿ ಶಾಲೆಗೆ ಹೋಗುತ್ತಿದ್ದೇನೆ. ನಾನು ನನ್ನ ತಾಯ್ನಾಡಿಗೆ ಯಾವತ್ತೂ ಹಿಂದಿರುಗಲು ಬಯಸುವುದಿಲ್ಲ.  ಏಕೆಂದರೆ ಸೈನಿಕರು ಮಕ್ಕಳನ್ನು ಕೊಲ್ಲುತ್ತಾರೆ. ನಮ್ಮನ್ನು ಮ್ಯಾನ್ಮಾರ್ ಗೆ ಕಳುಹಿಸದಂತೆ ನಾನು ಸರಕಾರದೊಂದಿಗೆ ಮನವಿ ಮಾಡುತ್ತೇನೆ” ಎಂದು ನೂರುಲ್ ಹೇಳುತ್ತಾರೆ.

ದಕ್ಷಿಣ ದಿಲ್ಲಿಯ ಶಹೀನ್ ಬಾಘ್ ನಲ್ಲಿರುವ ಆಶ್ರಯ ಪಡೆದಿರುವ 70 ಕುಟುಂಬಗಳಲ್ಲಿ ನೂರುಲ್ ಇಸ್ಲಾಮ್ ನ ಕುಟುಂಬವೂ ಸೇರಿದೆ.  ರೋಹಿಂಗ್ಯ ನಿರಾಶ್ರಿತರನ್ನು ‘ಅತ್ಯಂತ ದೌರ್ಜನ್ಯಕ್ಕೊಳಗಾದ’ ಅಲ್ಪಸಂಖ್ಯಾತರು ಎಂದು ವಿಶ್ವಸಂಸ್ಥೆ ಬಣ್ಣಿಸಿದೆ. ರಾಜಧಾನಿಯಲ್ಲಿ ಸುಮಾರು 1,200 ರೋಹಿಂಗ್ಯಾ ನಿರಾಶ್ರಿತರಿದ್ದಾರೆ. ಅವರಲ್ಲಿ ಕೆಲವರು ಶಹೀನ್ ಬಾಘ್ ಮತ್ತು ಕೆಲವರು ಮದನ್ಪುರ್ ಖಾದರ್ ನಲ್ಲಿ ಆಶ್ರಯ ಪಡೆದಿದ್ದಾರೆ.

“ಅವರು ನಮ್ಮ ಮನೆಗಳಿಗೆ ಬೆಂಕಿ ಹಚ್ಚಿ ಬೌದ್ಧ ಧರ್ಮ ಸ್ವೀಕರಿಸುವಂತೆ ಒತ್ತಾಯಿಸಿದರು. ಸ್ಥಳೀಯ ಮಸೀದಿಗೂ ತೆರಳದಂತೆ ನಮಗೆ ನಿರ್ಬಂಧ ಹೇರಲಾಗಿತ್ತು. ರಾತ್ರಿ ಸಮಯದಲ್ಲಿ ಮಲಗಲೂ ನಮಗೆ ಹೆದರಿಕೆಯಾಗುತ್ತಿತ್ತು” ಎನ್ನುತ್ತಾರೆ ನಿರಾಶ್ರಿತೆಯರಲ್ಲೊಬ್ಬರಾದ ಸಬೀಕುನ್ ನಹರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News