×
Ad

ಗ್ರಾಮೀಣ ಕ್ರೀಡೆಗಳಿಂದ ಸೌಹಾರ್ದತೆ ವೃದ್ಧಿ : ಮಹಮ್ಮದ್ ಮೋನು

Update: 2017-09-17 19:37 IST

ಉಳ್ಳಾಲ, ಸೆ. 17: ಜಾತಿ, ಮತದ ಭೇದ-ಬಾವಗಳನ್ನು ಮೀರಿ ಶಾಂತಿ, ಸೌಹಾರ್ದತೆಯ ಜೊತೆಗೆ ನಮ್ಮ ನಾಡಿನ ಕೃಷಿ ಸಂಸ್ಕೃತಿಯನ್ನು ಬೆಸೆಯುವ ಗ್ರಾಮೀಣ ಕ್ರೀಡೆಗಳ ಆಯೋಜನೆಗಳು ಇಂದಿನ ದಿವಸಗಳಲ್ಲಿ ಅನಿವಾರ್ಯವಾಗಿದೆ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು.

ಜನಸೇವಾ ಯುವಕ ಮಂಡಲ ಅಂಬ್ಲಮೊಗರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದ.ಕ ಜಿಲ್ಲಾ ಪಂಚಾಯತ್ ಜಂಟಿ ಆಶ್ರಯದಲ್ಲಿ ಕುತ್ತಾರು ಅಂಬ್ಲಮೊಗರುವಿನ ದೋಟೆಮಾರು ಗದ್ದೆಯಲ್ಲಿ ರವಿವಾರ ನಡೆದ 'ಬಲೇ ಕೆಸರ್ಡು ಗೊಬ್ಬುಗ' ತುಳುನಾಡಿನ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತೀ ವರುಷವೂ ಜನಸೇವಾ ಯುವಕ ಮಂಡಲದ ಸದಸ್ಯರು ಎಲ್ಲಾ ಜಾತಿ, ಮತ ಪಕ್ಷದವರನ್ನು ಒಟ್ಟುಗೂಡಿಸಿಕೊಂಡು ತುಳುನಾಡಿನ ಸಂಸ್ಕೃತಿಯನ್ನು ನೆನಪಿಸುವ ಕ್ರೀಡಾಕೂಟಗಳನ್ನು ಆಚರಿಸುವುದರೊಂದಿಗೆ ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ಸಾರುತ್ತಿದ್ದಾರೆ. ಜಗತ್ತಿನಲ್ಲಿ ಬಲು ಮುಖ್ಯವಾಗಿ ಮಾನವ ಧರ್ಮವೊಂದೇ ಶ್ರೇಷ್ಟವಾಗಿದ್ದು, ಮಾನವೀಯ ಮನೋಭಾವವನ್ನು ಪರಸ್ಪರ ಬಲಗೊಳಿಸಲು ಇಂತಹ ಕ್ರೀಡಾಕೂಟಗಳೇ ಉತ್ತಮ ವೇದಿಕೆಯಾಗಿದೆ ಎಂದರು.

ಅಧ್ಯಕ್ಷೀಯ ಸ್ಥಾನವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ ತುಳುನಾಡಿನ ಕೃಷಿಕ ಕುಟುಂಬದ ಯುವ ಪೀಳಿಗೆಯಿಂದು ವೈಟ್ ಕಾಲರ್ ಹುದ್ದೆಗಳನ್ನು ಅರಸಿ ನಗರದಲ್ಲಿ ನೆಲೆಸಿ ಕೃಷಿಯಿಂದ ವಿಮುಖರಾಗಿದ್ದಾರೆ. ಸರಕಾರವೂ ವಿವಿಧ ಯೋಜನೆ, ಕಾರ್ಯಕ್ರಮಗಳ ಮೂಲಕ ಕೃಷಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದ್ದು ಸಂಘ, ಸಂಸ್ಥೆಗಳು ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದಲಾದರೂ ಮಕ್ಕಳು, ಯುವ ಜನತೆಯಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡುವಂತಾಗಬೇಕೆಂದು ಆಶಿಸಿದರು.

ಉದ್ಯಮಿ ಸತೀಶ್ ಮುಂಚೂರು, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಂಬ್ಲಮೊಗರು ಪಡ್ಯಾರಮನೆ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಮಂಗಳೂರು, ತುಳು ಚಿತ್ರನಟ ಅರವಿಂದ ಬೋಳಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಪ್ರದೀಪ್ ಡಿಸೋಜಾ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್ ಉಚ್ಚಿಲ್, ಕೋಟ್ರಗುತ್ತು ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ರೈ, ಅಂಬ್ಲಮೊಗರು ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ರಫೀಕ್, ಸದಸ್ಯರಾದ ದಯಾನಂದ ಶೆಟ್ಟಿ, ರಾಜೀವಿ, ರೇಷ್ಮಾ ವಿಲ್ಫ್ರೆಡ್, ನವೀನ್ ಡಿಸೋಜಾ, ಜನಸೇವಾ ಯುವಕ ಮಂಡಲದ ಗೌರವಾಧ್ಯಕ್ಷರಾದ ಸಂಜೀವ ಶೆಟ್ಟಿ ಪಡ್ಯಾರಮನೆ,ಗೌರವ ಸಲಹೆಗಾರರಾದ ವಿಜಯಾ, ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಅಂಬ್ಲಮೊಗರು, ಪದಾಧಿಕಾರಿಗಳಾದ ಸುರೇಶ್ ಅಂಬ್ಲಮೊಗರು, ಹರೀಶ್ ಅಂಬ್ಲಮೊಗರು, ಲಕ್ಷ್ಮೀನಾರಾಯಣ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News